Home ತಾಜಾ ಸುದ್ದಿ ರೇವಣ್ಣಗೆ ಜಾಮೀನು: ಸಂಭ್ರಮಿಸುವ ಸಮಯ ಇದಲ್ಲ: HDK

ರೇವಣ್ಣಗೆ ಜಾಮೀನು: ಸಂಭ್ರಮಿಸುವ ಸಮಯ ಇದಲ್ಲ: HDK

0

ಬೆಂಗಳೂರು: ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಸಂಭ್ರಮ ಪಡುವುದು ಬಂಡ. ನಾನು ಸಂತೋಷ ಪಡುತ್ತೇನೆ ಎಂದು ಭಾವಿಸಬೇಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವರಿಗೆ ಜಾಮೀನು ಸಿಕ್ಕಿದೆ ನಿಜ. ಆದರೆ, ಇದಕ್ಕೆ ನಾನು ಸಂತೋಷ ಪಡಲಾರೆ. ಪಟಾಕಿ ಸಿಡಿಸಿ ಸಂಭ್ರಮಿಸುವ ಸಮಯವೂ ಇದಲ್ಲ ಎಂದು ಕಾರ್ಯಕರ್ತರಿಗೆ ಹೇಳಬಯಸುತ್ತೇನೆ. ಈಗ ನಡೆದಿರುವುದು ರಾಜ್ಯವೇ ತಲೆ ತಗ್ಗಿಸುವ ವಿಚಾರವಾಗಿದೆ, ತಪ್ಪಿತಸ್ಥರಿಗೆ ಶಿಕ್ಷೆ ಆದಾಗ ಸಂಭ್ರಮ ಪಡಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಎಸ್‌ಐಟಿ ಅಧಿಕಾರಿಗಳ ಕಾರ್ಯವೈಖರಿ ಹೇಗಿದೆ? ಚುನಾವಣೆ ಹಿನ್ನೆಲೆಯಲ್ಲಿ ಯಾರು ಪೆನ್ ಡ್ರೈವ್ ಹಂಚಿದರೋ ಅವರನ್ನು ಇದುವರೆಗೂ ಮುಟ್ಟಿಲ್ಲ. ಹಾಸನ ಜಿಲ್ಲಾದ್ಯಂತ ಪೆನ್‌ ಡ್ರೈವ್‌ ಅನ್ನು ರಿಲೀಸ್‌ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ನ ನವೀನ್‌ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕುತ್ತಾನೆ. ಆದರೆ, ಇಲ್ಲಿಯವರೆಗೆ ಆತನನ್ನು ಮುಟ್ಟಿಲ್ಲ. ಈ ಘಟನೆಗೆ ಕಾರಣವಾದ ವ್ಯಕ್ತಿಯನ್ನೂ ಹಿಡಿಯಲಿಲ್ಲ, ಸಂತ್ರಸ್ತೆಯರಿಗೆ ನ್ಯಾಯ ಸಿಗುವಂತೆ ಆಗಬೇಕು. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಒಂದು ಮಹಿಳೆ ದೂರು ಕೊಟ್ಟಿದ್ದು, ಆ ಹೆಣ್ಣುಮಕ್ಕಳಿಗೆ ಹೆದರಿಸಿ‌ ದೂರು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದೆಲ್ಲ ಕೆಲವೇ ದಿನಗಳಲ್ಲಿ ಹೊರಗೆ ಬರಲಿದೆ ಎಂದರು.

Exit mobile version