Home ತಾಜಾ ಸುದ್ದಿ ರಾಜೀನಾಮೆ ಕೊಡಲ್ಲ

ರಾಜೀನಾಮೆ ಕೊಡಲ್ಲ

0

ಬೆಂಗಳೂರು: ಚುನಾಯಿತ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ನಾಯಕರ ಪ್ರಯತ್ನ ಫಲಿಸುವುದಿಲ್ಲ. ನನ್ನನ್ನು ಹೇಗಾದರೂ ಮಾಡಿ, ತೇಜೋವಧೆ ಮಾಡಬೇಕೆಂಬ ಅವರ ಪ್ರಯತ್ನ ಫಲಿಸುವುದಿಲ್ಲ. ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ. ೧೩೬ ಜನ ಕಾಂಗ್ರೆಸ್ ಶಾಸಕರು, ಸಚಿವರು, ಪಕ್ಷದ ರಾಷ್ಟ್ರೀಯ ವರಿಷ್ಠರು ಹಾಗೂ ರಾಜ್ಯದ ಏಳು ಕೋಟಿ ಜನರ ಬೆಂಬಲ ನನಗಿದೆ. ರಾಜ್ಯಪಾಲರನ್ನು ಬಳಕೆ ಮಾಡಿಕೊಂಡು ಜನರಿಂದ ಆಯ್ಕೆಯಾದ ಸರ್ಕಾರ ಬುಡಮೇಲು ಮಾಡಬೇಕೆಂಬ ಬಿಜೆಪಿಯವರ ಹುನ್ನಾರ ಫಲಿಸುವುದಿಲ್ಲ. ಯಾವುದೇ ಕಾನೂನು ಹೋರಾಟಕ್ಕೆ ನಾನು ಸಿದ್ಧನಿದ್ದೇನೆ. ಶೀಘ್ರದಲ್ಲೇ ಈ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ ಕ್ರಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version