Home ನಮ್ಮ ಜಿಲ್ಲೆ ರಾಕ್‌ಸ್ಟಾರ್ ಹೋರಿ ನಿಧನಕ್ಕೆ ಮಾಜಿ ಸಿಎಂ ಬೊಮ್ಮಾಯಿ ಬೇಸರ

ರಾಕ್‌ಸ್ಟಾರ್ ಹೋರಿ ನಿಧನಕ್ಕೆ ಮಾಜಿ ಸಿಎಂ ಬೊಮ್ಮಾಯಿ ಬೇಸರ

0

ಬೆಂಗಳೂರು: ರಾಜ್ಯದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದ ನಮ್ಮ ಹಾವೇರಿಯ ಹೆಮ್ಮೆಯ ರಾಕ್ ಸ್ಟಾರ್ ಹೋರಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಮನಸ್ಸಿಗೆ ನೋವಾಯಿತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೋರಿ ಬೆದರಿಸುವ ಸ್ಪರ್ಧೆ ಎಲ್ಲಿಯೇ ಇದ್ದರೂ ಅಲ್ಲಿ ರಾಕ್ ಸ್ಟಾರ್ ಇದ್ದಾನೆಂದರೆ ಉಳಿದವರೆಲ್ಲರಿಗೂ ಸೋಲು ಖಚಿತ ಎನ್ನುವಷ್ಟರ ಮಟ್ಟಿಗೆ ರಾಕ್ ಸ್ಟಾರ್ ಹೋರಿ ಜನಪ್ರಿಯವಾಗಿತ್ತು. ಅಗಲಿದ ಅಭಿಮಾನಿಗಳ ನೆಚ್ಚಿನ ರಾಕ್‌ಸ್ಟಾರ್‌ಗೆ ಅಂತಿಮ ನಮನಗಳು. ಮುಂದಿನ ಜನ್ಮದಲ್ಲಿ ಹೋರಿ ಹಬ್ಬದ ತವರೂರಾಗಿರುವ ಹಾವೇರಿಯಲ್ಲಿಯೇ ಮತ್ತೊಮ್ಮೆ ಹುಟ್ಟಿ ಬಾ ಎಂದು ಪ್ರಾರ್ಥಿಸಿದ್ದಾರೆ.

Exit mobile version