Home ತಾಜಾ ಸುದ್ದಿ ಮೋರಿ ನಿರ್ಮಾಣಕ್ಕೆ ಮೋದಿ ಮೊರೆ: ಕರ್ತವ್ಯ ಲೋಪ ಪಿಡಿಒಗೆ ದಂಡ

ಮೋರಿ ನಿರ್ಮಾಣಕ್ಕೆ ಮೋದಿ ಮೊರೆ: ಕರ್ತವ್ಯ ಲೋಪ ಪಿಡಿಒಗೆ ದಂಡ

0

ಮಂಡ್ಯ: ಮನೆ ಮುಂದಿನ ಮೋರಿ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮೋರೆ ಹೋಗಿ ನ್ಯಾಯ ಪಡೆಯುವಲ್ಲಿ ಸಾಪ್ಟ್’ವೇರ್ ಇಂಜಿನಿಯರ್’ರೊಬ್ಬರು ಸಫಲರಾಗಿರುವ ಘಟನೆ ತಾಲ್ಲೂಕಿನ ಹಳೇ ಬೂದನೂರು ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಸಾಪ್ಟ್’ವೇರ್ ಇಂಜಿನಿಯರ್ ಬಿ.ಎಸ್.ಚಂದ್ರಶೇಖರ್ ಎಂಬುವವರು ಸತತ 4 ವರ್ಷದಿಂದ ಹೋರಾಡಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೂದನೂರು ಗ್ರಾಪಂ ಆಡಳಿತ ಮಂಡಳಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯ ಹಾಗೂ ಅಧಿಕಾರ ದುರುಪಯೋಗದ ವಿರುದ್ದ ಹೋರಾಡಿ ನ್ಯಾಯ ಸಿಕ್ಕಿದೆ. ಹಾಗಾಗಿ ಇಂದು ಕಾಮಗಾರಿ ಅರಂಭಿಸಿದ್ದಾರೆ ಎಂದರು.
ಸದರಿ ಕಾಮಗಾರಿ ಮಾಡದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿನಯ್ ಕುಮಾರ್ ಅವರಿಗೆ ₹ 10 ಸಾವಿರ ದಂಡ ವಿಧಿಸಲಾಗಿದೆ. ಅದರೂ ಕಾಮಗಾರಿ ನಡೆಸದೆ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಪಿಡಿಒ ಮೇಲ್ಮನವಿ ಸಲ್ಲಿಸಿ ವಿಚಾರಣೆ ನಡೆಯುತ್ತಿದೆ. ಅದರ ವಿರುದ್ದ ಹೋರಾಟ ಮುಂದುವರಿಸಿರುವುದಾಗಿ ತಿಳಿಸಿದರು. ಗ್ರಾಮ ಪಂಚಾಯತಿ ಅವ್ಯವಹಾರದ ವಿರುದ್ದ ದನಿ ಎತ್ತಿದ್ದಕ್ಕೆ ತನಗೆ ತೊಂದರೆ ನೀಡಿರುವ ಗ್ರಾಪಂ ಆಡಳಿತ ಸಾಮಾನ್ಯ ಬಡ ಜನರಿಗೆ ಹೇಗೆ ಸ್ಪಂದಿಸುತ್ತದೆ ಎಂದು ಅವರು ಪ್ರಶ್ನಿಸಿದರು.

Exit mobile version