Home ನಮ್ಮ ಜಿಲ್ಲೆ ಮುರನಾಳ‌ ಕೆರೆಯಲ್ಲಿನ ಮೊಸಳೆ ಬಲೆಗೆ‌..!

ಮುರನಾಳ‌ ಕೆರೆಯಲ್ಲಿನ ಮೊಸಳೆ ಬಲೆಗೆ‌..!

0
ಮುರನಾಳ‌ ಕೆರೆಯಲ್ಲಿನ ಮೊಸಳೆ ಬಲೆಗೆ‌..!

ಬಾಗಲಕೋಟೆ: ಸಮೀಪದ ಮುರನಾಳ‌ ಪುನರ್ವಸತಿ ಕೇಂದ್ರದ ಕೆರೆಯಲ್ಲಿ ಕಾಣಿಸಿಕೊಂಡಿದ್ದ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಜನವಸತಿ‌ ಪ್ರದೇಶದ ಮಧ್ಯದಲ್ಲೇ ಕೆರೆ‌‌ ಇದ್ದಿದ್ದರಿಂದ ಆತಂಕ ಹೆಚ್ಚಾಗಿತ್ತು. ಶುಕ್ರವಾರ ದಿನವಿಡೀ ಮೊಸಳೆ ಇರುವಿಕೆ ಖಚಿತಪಡಿಸಿಕೊಂಡಿದ್ದ ಅರಣ್ಯ ಇಲಾಖೆ ಶನಿವಾರ ಬಲೆ ಹಾಕಿತ್ತು. ಮೊಸಳೆ‌ ಬಲೆಗೆ ಸಿಲುಕಿರುವುದು ಖಚಿತವಾಗುತ್ತಿದ್ದಂತೆ ಅದನ್ನು ದಡಕ್ಕೆ ಎಳೆದು ತಂದು ಹಗ್ಗದಿಂದ ಬಿಗಿದು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಯಿತು.

Exit mobile version