Home ನಮ್ಮ ಜಿಲ್ಲೆ ಕೋಲಾರ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದರೆ ರಾಜೀನಾಮೆ

ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದರೆ ರಾಜೀನಾಮೆ

0

ಕೋಲಾರ ಕಾಂಗ್ರೆಸ್​ ಬಿಕ್ಕಟ್ಟು; ಮುನಿಯಪ್ಪ ಫ್ಯಾಮಿಲಿಗೆ ಟಿಕೆಟ್​ ಕೊಟ್ಟರೆ ರಾಜೀನಾಮೆ ನೀಡೋದಾಗಿ ‘ಕೈ’ ಶಾಸಕರ ಬೆದರಿಕೆ.

ಬೆಂಗಳೂರು: ಕೆ ಹೆಚ್ ಮುನಿಯಪ್ಪ ಅವರು ದೇವನಹಳ್ಳಿಯ ಶಾಸಕರಾಗಿ ಸಚಿವರಾಗಿದ್ದಾರೆ. ಅವರ ಪುತ್ರಿ ರೂಪಕಲಾ ಕೆಜಿಎಫ್ ನ ಶಾಸಕಿಯಾಗಿದ್ದು ಈಗ ಅಳಿಯನಿಗೂ ಟಿಕೆಟ್ ಕೇಳುತ್ತಿರುವುದು ಇದು ಕುಟುಂಬ ರಾಜಕೀಯವನ್ನು ತೋರಿಸುತ್ತದೆ. ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದರೆ ಜಿಲ್ಲೆಯ ಬೇರೆ ನಾಯಕರಿಗೆ ಅನ್ಯಾಯವಾಗುತ್ತದೆ ಎಂದು ಐವರು ಶಾಸಕರು ಬಂಡಾಯವೆದ್ದು ರಾಜೀನಾಮೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಕೋಲಾರ ‘ಕೈ’ ಟಿಕೆಟ್ ಕಗ್ಗಂಟು ರಾಜೀನಾಮೆಗೆ ನಿರ್ಧರಿಸಿ ವಿಧಾನಸೌಧಕ್ಕೆ ಆಗಮಿಸಿದ ಸಚಿವರು, ಶಾಸಕರು. ಸಚಿವ ಕೆ.ಎಚ್.ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಸಚಿವ ಎಂ.ಸಿ ಸುದಾಕರ್, ಶಾಸಕರಾದ ಕೊತ್ತೂರು ಮಂಜುನಾಥ್, ಕೆವೈ ನಂಜೇಗೌಡ, ಪರಿಷತ್ ಸದಸ್ಯ ಅನಿಲ್ ಕುಮಾರ, ನಜೀರ್ ಅಹ್ಮದ್ ರಾಜೀನಾಮೆಗೆ ನಿರ್ಧರಿಸಿದ್ದು ವಿಧಾನಸೌಧಕ್ಕೆ ಆಗಮಿಸಿದ್ದಾರೆ.

Exit mobile version