Home ನಮ್ಮ ಜಿಲ್ಲೆ ಚಿತ್ರದುರ್ಗ ಮೀಸಲಾತಿ ಹೆಚ್ಚಳ, ಸರ್ಕಾರದ ದೊಂಬರಾಟ: ಪ್ರಿಯಾಂಕ್ ಖರ್ಗೆ

ಮೀಸಲಾತಿ ಹೆಚ್ಚಳ, ಸರ್ಕಾರದ ದೊಂಬರಾಟ: ಪ್ರಿಯಾಂಕ್ ಖರ್ಗೆ

0
priyank kharge

ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿ ಹೆಚ್ಚಳ ಪ್ರಸ್ತಾಪ ರಾಜ್ಯ ಬಿಜೆಪಿ ಸರ್ಕಾರದ ದೊಂಬರಾಟ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಚಿತ್ರದುರ್ಗದ ಹಿರಿಯೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಚುನಾವಣೆ ನಿಮಿತ್ತ ಇಂತಹ ಕೆಲಸಕ್ಕೆ ಮುಂದಾಗಿದೆ ಅಷ್ಟೇ. ಅಲ್ಲದೆ ಇವರು ಕಳಿಸಿದ ಫೈಲ್‌ಗಳು ಕೇಂದ್ರದಲ್ಲಿ ಧೂಳು ತಿನ್ನುತ್ತದೆ. ಇಷ್ಟು ವರ್ಷಗಳ ಕಾಲ ಬಿಜೆಪಿ ಯಾಕೆ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಿಲ್ಲ? ಎಂದು ಪ್ರಶ್ನಿಸಿದರು. ಬಿಜೆಪಿ ದಲಿತರು, ಹಿಂದುಳಿದವರು,‌ ಅಲ್ಪಸಂಖ್ಯಾತರ ವಿರೋಧಿಯಾಗಿದ್ದು, ಆರ್‌ಎಸ್ಎಸ್ ಸಿದ್ಧಾಂತವನ್ನು ಒಪ್ಪದವರನ್ನು ಬಿಜೆಪಿ ವಿರೋಧಿಸುತ್ತದೆ ಎಂದರು. 40% ಪರ್ಸೆಂಟ್ ಭ್ರಷ್ಟಾಚಾರದ ಸರ್ಕಾರವನ್ನು ಜನ ಕಂಡಿದ್ದಾರೆ. ಈಗಾಗಿ ಬಿಜೆಪಿ ಮುಕ್ತ ಕರ್ನಾಟಕದ ಕಾಲ ಸನ್ನಿಹಿತವಾಗಿದೆ ಎಂದು ಭವಿಷ್ಯ ನುಡಿದರು.

Exit mobile version