Home ತಾಜಾ ಸುದ್ದಿ ಮಹಿಳೆ ಬ್ಯಾಗಿನಲ್ಲಿದ್ದ 10 ಸಾವಿರ ರೂ. ಎಗರಿಸಿದ ಖದೀಮರು

ಮಹಿಳೆ ಬ್ಯಾಗಿನಲ್ಲಿದ್ದ 10 ಸಾವಿರ ರೂ. ಎಗರಿಸಿದ ಖದೀಮರು

0

ಬೆಳಗಾವಿ: ಬೆಳಗಾವಿ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗಿನಲ್ಲಿದ್ದ 10 ಸಾವಿರ ರೂ. ವನ್ನು ಖದೀಮರು ದೋಚಿರುವ ಘಟನೆ ರವಿವಾರ ರಾತ್ರಿ ನಡೆದಿದೆ.
ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗಿನಲ್ಲಿ 10 ಸಾವಿರ ಹಣವನ್ನು ಇಟ್ಟುಕೊಂಡು ಸಂಕೇಶ್ವರಕ್ಕೆ ಹೋಗಲು ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ರಾಜ್ಯ‌ ಸಂಸ್ಥೆಯ ಬಸ್‌ನಲ್ಲಿ ಹತ್ತುವಾಗ ಬ್ಯಾಗಿನಲ್ಲಿ 10 ಸಾವಿರ ಹಣ ಎಗರಿಸಿ ಖದೀಮರು ಪರಾರಿಯಾಗಿದ್ದಾರೆ. ಮಹಿಳೆ ಬಸ್ಸಿನ ನಿರ್ವಾಹಕರಿಗೆ ಟಿಕೆಟ್ ಹಣಕ್ಕಾಗಿ ಬ್ಯಾಗಿನಲ್ಲಿ ನೋಡಿದಾಗ ಬ್ಯಾಗಿನ ಚೈನ್ ತುಂಡು ಮಾಡಿ ಬ್ಯಾಗಿನಲ್ಲಿದ್ದ ಹಣ ಎಗರಿಸಿರುವುದು ಗೊತ್ತಾಗಿದೆ.

Exit mobile version