Home ಅಪರಾಧ ಬೈಕ್ ಮೇಲೆ ಬಿದ್ದ ರಸ್ತೆ ಬದಿಯ ಮರ: ಯುವಕ ಸ್ಥಳದಲ್ಲಿಯೇ ಸಾವು

ಬೈಕ್ ಮೇಲೆ ಬಿದ್ದ ರಸ್ತೆ ಬದಿಯ ಮರ: ಯುವಕ ಸ್ಥಳದಲ್ಲಿಯೇ ಸಾವು

0

ಬೆಳ್ತಂಗಡಿ:ಜಾರಿಗೆ ಬೈಲು ಎಂಬಲ್ಲಿ ಹೆದ್ದಾರಿ ಬದಿಯ ಮರದ ಗೆಲ್ಲು ಬಿದ್ದು ಬೈಕ್ಕಲ್ಲಿ ಬರುತಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾ 20 ಗುರುವಾರ ಸಂಜೆ ನಡೆದಿದೆ.
ಮೃತ ಯುವಕನನ್ನು ಬೆಳಾಲು ನಿವಾಸಿ ಪ್ರವೀಣ್ (25) ಗುರುತಿಸಲಾಗಿದೆ.ಮಂಗಳೂರಿನ ಖಾಸಗಿ ಬ್ಯಾಂಕೊಂದರಲ್ಲಿ ಲೋನ್ ಸೆಕ್ಷನ್ ನಲ್ಲಿ ಕೆಲಸ ಮಾಡುತಿದ್ದ ಬೆಳಾಲಿನ ಪ್ರವೀಣ್ ಅವರು ಕೆಲಸ ಮುಗಿಸಿಕೊಂಡು ಉಪ್ಪಿನಂಗಡಿ ಗುರುವಾಯನಕೆರೆ ಹೆದ್ದಾರಿಯಲ್ಲಿ ಬರುತಿದ್ದ ವೇಳೆ ಜಾರಿಗೆ ಬೈಲು ಎಂಬಲ್ಲಿ ರಸ್ತೆ ಬದಿಯ ಮರದ ಗೆಲ್ಲು ಮುರಿದು ಅವರ ಬೈಕ್ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಬೆಳ್ತಂಗಡಿ ಸರ್ಕಾರಿ ತರುವಷ್ಟರಲ್ಲೇ ಸಾವನ್ನಪ್ಪಿದ್ದಾರೆ. ಎಂದು ತಿಳಿದು ಬಂದಿದೆ.

Exit mobile version