Home ನಮ್ಮ ಜಿಲ್ಲೆ ಗದಗ ಬೆಂಗಳೂರಲ್ಲಿ ಪಿಲ್ಲರ್‌ ಅವಘಡ: ತಾಯಿ-ಮಗ ಅಂತ್ಯಕ್ರಿಯೆ ಗದಗನಲ್ಲಿ

ಬೆಂಗಳೂರಲ್ಲಿ ಪಿಲ್ಲರ್‌ ಅವಘಡ: ತಾಯಿ-ಮಗ ಅಂತ್ಯಕ್ರಿಯೆ ಗದಗನಲ್ಲಿ

0

ಗದಗ: ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಬಿದ್ದು ಸಾವನ್ನಪ್ಪಿದ ತೇಜಸ್ವಿನಿ ಸುಲಾಖೆ, ವಿಹಾನ ಸುಲಾಖೆ ಅವರ ಅಜ್ಜ, ಅಮ್ಮ ವಾಸಿಸುತ್ತಿದ್ದ ಗದಗ ಸಿದ್ದರಾಮೇಶ್ವರ ಬಡಾವಣೆಯಲ್ಲಿ ನೀರವ ಮೌನ ಆವರಿಸಿದೆ.
ಮೃತರು ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ವಿಜಯಕುಮಾರ್ ಸುಲಾಖೆ ಅವರ ಹಿರಿಯ ಸೊಸೆ ಮತ್ತು ಮೊಮ್ಮಗ. ಸುಲಾಖೆ ಅವರ ಹಿರಿಯ ಪುತ್ರ ಲೋಹಿತ್ ಸುಲಾಖೆ ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನೀಯರ್ ಆಗಿದ್ದು ಆರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಸಾವನ್ನಪ್ಪಿದ ತೇಜಸ್ವಿನಿ ಮತ್ತು ಪುತ್ರ ವಿಹಾನ ಕಳೆದ ಐದು ದಿನಗಳ ಹಿಂದೆ ಗದಗಕ್ಕೆ ಬಂದು ಹೋಗಿದ್ದರೆಂದು ಅಕ್ಕಪಕ್ಕದ ಜನರು ಸ್ಮರಿಸಿಕೊಂಡರು.
ದಿ. ೧೧ರಂದು ಗದಗನಲ್ಲಿ ಅಂತ್ಯಕ್ರಿಯೆ
ಬೆಂಗಳೂರಿನಲ್ಲಿಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ತೇಜಸ್ವಿನಿ ಸುಲಾಖೆ, ಪುತ್ರಿ ವಿಹಾನ ಸುಲಾಖೆ ಅವರ ಪಾರ್ಥೀವ ಶರೀರಗಳು ನಾಳೆ ದಿ.೧೧ ರಂದು ಗದಗಕ್ಕೆ ಆಗಮಿಸಲಿವೆ. ಗದಗನಲ್ಲಿ ಈ ಇಬ್ಬರ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.

Exit mobile version