Home ತಾಜಾ ಸುದ್ದಿ ಬಿಜೆಪಿ ತೆಕ್ಕೆಯಲ್ಲಿ ಶಿಕಾರಿಪುರ ಪುರಸಭೆ ಸುಭದ್ರ

ಬಿಜೆಪಿ ತೆಕ್ಕೆಯಲ್ಲಿ ಶಿಕಾರಿಪುರ ಪುರಸಭೆ ಸುಭದ್ರ

0

ಶಿವಮೊಗ್ಗ: ಬಿಜೆಪಿ ತೆಕ್ಕೆಯಲ್ಲಿ ಶಿಕಾರಿಪುರ ಪುರಸಭೆ ಸುಭದ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಆರೋಗ್ಯ ಹಬ್ಬದ ಕುರಿತು ಗಣ್ಯರ ಮಾತು


ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಚುನಾವಣೆಯ ನಂತರ ನಡೆದ ವಿಜಯೋತ್ಸವ ನಮ್ಮ ಮೇಲಿಟ್ಟಿರುವ ಅಗಾಧ ವಿಶ್ವಾಸ ಹಾಗೂ ಪ್ರೀತಿಯನ್ನು ಪ್ರತಿಬಿಂಬಿಸಿತು. ಶಿಕಾರಿಪುರ ಪುರಸಭೆಗೆ ಇಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶೈಲಾ ಯೋಗೀಶ್ ಮಡ್ಡಿ, ಉಪಾಧ್ಯಕ್ಷರಾಗಿ ರೂಪಾ ಮಂಜುನಾಥ್ ಅವರುಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಶಿಕಾರಿಪುರ ವಿಧಾನಸಭಾ ಕ್ಷೇತ್ರ ಹಿಂದೆ, ಇಂದು ಹಾಗೂ ಮುಂದೂ ಬಿಜೆಪಿಯ ಸುಭದ್ರ ಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ, ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ತಾಲ್ಲೂಕು ಅಧ್ಯಕ್ಷ ಹನುಮಂತಪ್ಪನವರು ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು ಎಂದಿದ್ದಾರೆ.

Exit mobile version