ಧಾರವಾಡ: ಬಿಜೆಪಿಯವರು ಬೇರೆಯವರ ಬಗ್ಗೆ ಮಾತನಾಡುವ ಮುನ್ನ ತಮ್ಮಲ್ಲಿ ಇರುವ ಗೊಂದಲಗಳನ್ನು ಸರಿಪಡಿಸಿಕೊಳ್ಳಲಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ನಾನೂ ಸಿಎಂ ಆಗಬೇಕು ಎಂಬ ತಮ್ಮದೇ ಮಾತಿಗೆ ಪ್ರತಿಕ್ರಿಯೆ ನೀಡದ ಅವರು, ಬಿಜೆಪಿಯವರು ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ, ಕಾಂಗ್ರೆಸ್ ಬಗೆಗೆ ಮಾತನಾಡುವುದಕ್ಕೂ ಮುನ್ನ ತಮ್ಮಲ್ಲಿಯ ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.