Home ನಮ್ಮ ಜಿಲ್ಲೆ ಉತ್ತರ ಕನ್ನಡ ಬಿಜೆಪಿಯವರು ರಾಜಕಾರಣ ಕುಲಗೇಡಿಸುತ್ತಿದ್ದಾರೆ

ಬಿಜೆಪಿಯವರು ರಾಜಕಾರಣ ಕುಲಗೇಡಿಸುತ್ತಿದ್ದಾರೆ

0

ಹೊನ್ನಾವರ: ಧರ್ಮ ಸಂಸ್ಕೃತಿ ಒಂದು ಕಡೆ, ರಾಜಕಾರಣ-ಸಮಾಜಸೇವೆ ಇನ್ನೊಂದು ಕಡೆ ಎನ್ನುವ ತತ್ವ ಕಾಂಗ್ರೆಸ್ಸಿನದ್ದು. ಆದರೆ, ಅವರು ಎಲ್ಲವನ್ನೂ ಮಿಶ್ರ ಮಾಡಿ ರಾಜಕಾರಣ ಕುಲಗೇಡಿಸುತ್ತಾರೆ ಎಂದು ಕೆನರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಹೇಳಿದರು.
ತಾಲೂಕಿನ ಅರೇಅಂಗಡಿ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆಯ ನಿಮಿತ್ತ ಕಾಂಗ್ರೆಸ್ ವತಿಯಿಂದ ನಡೆದ ಬಹಿರಂಗ ಪ್ರಚಾರದಲ್ಲಿ ಅವರು ಮಾತನಾಡಿ‌, ಜಾತಿ-ಜಾತಿ, ಧರ್ಮ-ಧರ್ಮದ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬಿಜೆಪಿಯವರು ಮಾಡುತ್ತಾರೆ ಎಂದರು.

Exit mobile version