Home ನಮ್ಮ ಜಿಲ್ಲೆ ಉತ್ತರ ಕನ್ನಡ ಬಸ್‌ನಲ್ಲಿ  ಚಾಕುವಿನಿಂದ ಇರಿದು ಕೊಲೆ

ಬಸ್‌ನಲ್ಲಿ  ಚಾಕುವಿನಿಂದ ಇರಿದು ಕೊಲೆ

0

ಶಿರಸಿ : ಶಿರಸಿಯಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಇಲ್ಲಿನ ಹೊಸಬಸ್ ನಿಲ್ದಾಣದಿಂದ ಹಳೆಬಸ್ ನಿಲ್ದಾಣಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಸಹಪ್ರಯಾಣಿಕನೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿ, ಬಸ್‌ನಿಂದ ಹಾರಿ ಪರಾರಿಯಾಗಿ, ನಂತರ ನಗರ ಠಾಣೆಗೆ ಬಂದು ಪೋಲೀಸರಿಗೆ ಶರಣಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಗಂಗಾಧರ, ಕೊಲೆಯಾದ ದುರ್ದೈವಿಯಾಗಿದ್ದಾನೆ. ಈತ ಹೆಂಡತಿ ಪೂಜಾಳೊಂದಿಗೆ ಪ್ರಯಾಣಿಸುತ್ತಿದ್ದಾಗ ಆರೋಪಿ ಶಿರಸಿಯ ಪ್ರೀತಮ ಮ್ಯಾನುವಲ್ ಡಿಸೋಜ, ಗಂಗಾಧರನಿಗೆ ಚಾಕುವಿನಿಂದ ಇರಿದು ಕೊಲೆಮಾಡಿದ ಬಸ್ ನಿಂದ ಹಾರಿ ಪರಾರಿಯಾಗಿದ್ದನು. ಪೋಲಿಸರು ತೀವೃ ತನಿಖೆ ನಡೆಸುತ್ತಿದ್ದಂತೆಯೇ, ಆರೋಪಿ ನಗರ ಠಾಣೆಗೆ ಬಂದು ಪೋಲೀಸರಿಗೆ ಶರಣಾಗಿದ್ದಾನೆ.
ಗಂಡನನ್ನು ಹಂತಕನಿAದ ತಪ್ಪಿಸುವ ಸಂದರ್ಭದಲ್ಲಿ ಮೃತನ ಹೆಂಡತಿ ಪೂಜಾ ಗಂಗಾಧರ ಕೈಯಿಗೂ ಚಾಕುವಿನಿಂದ ಇರಿದಿದ್ದು, ಗಾಯಗಳಾಗಿವೆ. ಶಿರಸಿಯವಳಾದ ಪೂಜಾ ಮತ್ತು ಸಾಗರದ ಗಂಗಾಧರ ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿತ್ತು. ಇವರಿಬ್ಬರೂ ಪೂಜಾಳ ಅತ್ತೆ ಮನೆಯಾದ ಅಚನಳ್ಳಿಗೆ ಆಗಮಿಸಿದ್ದವರು, ಶನಿವಾರ ಸಂಜೆ ೭.೩೦ ರ ಸುಮಾರಿಗೆ ಹೊಸಬಸ್ ನಿಲ್ದಾಣಕ್ಕೆ ಬಂದು ಬೆಂಗಳೂರಿಗೆ ತೆರಳಲು ಬಸ್ ಹತ್ತಿದ್ದರು. ಈ ಸಂದರ್ಭದಲ್ಲಿ ಪ್ರೀತಮ ಸಹ ಬಸ್ ಹತ್ತಿದ್ದನು. ಬಸ್ ಇಲ್ಲಿನಂತರ ಬಸ್‌ನಿಂದ ಹಾರಿ ಪರಾರಿಯಾಗಿದ್ದವನು, ನಂತರ ನಗರ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಡಿವಾವೈಎಸ್ಪಿ ಗಣೇಶ ಕೆ ಎಲ್., ಸಿಪಿಐ ಶಶಿಕಾಂತ ವರ್ಮಾ ಮತ್ತು ಪಿಎಸ್‌ಐ ನಾಗಪ್ಪ ಬಿ ಕೂಡಲೇ ಸರಕಾರಿ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದರು.

Exit mobile version