Home ತಾಜಾ ಸುದ್ದಿ ಬಲರಾಮನಿಗೆ ಶ್ರದ್ಧಾಂಜಲಿ

ಬಲರಾಮನಿಗೆ ಶ್ರದ್ಧಾಂಜಲಿ

0

ಶ್ರೀರಂಗಪಟ್ಟಣ: ಇತ್ತೀಚೆಗೆ ನಿಧನವಾದ ದಸರಾ ಅಂಬಾರಿ‌ ಹೊರುತ್ತಿದ್ದ ಆನೆ ಬಲರಾಮನಿಗೆ ಶ್ರೀರಂಗಪಟ್ಟಣದಲ್ಲಿ ಮಂಡ್ಯ ರಕ್ಷಣಾ ವೇಧಿಕೆ ಕಾರ್ಯಕರ್ತರಿಂದ ಶ್ರದ್ದಾಂಜಲಿ ಸಮರ್ಪಿಸಲಾಯಿತು.
ಶ್ರೀರಂಗಪಟ್ಟಣದ ಕುವೆಂಪು ವೃತ್ತದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಲರಾಮ‌ ಆನೆಯ ಭಾವಚಿತ್ರವುಳ್ಳ ಕಟೌಟ್ ಗೆ ಪುಷ್ಪಾರ್ಚನೆ ಸಲ್ಲಿಸಿ, ಕಬ್ಬಿನ ಹಾಲಿನ ನೈವೇದ್ಯದ ಮೂಲಕ ಬಲರಾಮನ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಮಂಡ್ಯ ರಕ್ಷಣಾ ವೇಧಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು, ಉಪ ವಲಯ ಅರಣ್ಯಾಧಿಕಾರಿ ಶಿವು ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version