Home ತಾಜಾ ಸುದ್ದಿ ಬದಲಾದ ಕಮಲ ನಾಯಕರ ಪ್ರೊಫೈಲ್‌

ಬದಲಾದ ಕಮಲ ನಾಯಕರ ಪ್ರೊಫೈಲ್‌

0

ಪ್ರಮುಖ ನಾಯಕರ ಸಾಮಾಜಿಕ ಜಾಲತಾಣದ ಪ್ರೊಫೈಲ್‌ನ ಬಯೋದಲ್ಲಿ ಬದಲಾವಣೆ

ಬೆಂಗಳೂರು: ಬಿಜೆಪಿಯ ಪ್ರಮುಖ ನಾಯಕರ ಸಾಮಾಜಿಕ ಜಾಲತಾಣದ ಪ್ರೊಫೈಲ್‌ನ ಬಯೋದಲ್ಲಿ ಮೋದಿ ಕಾ ಪರಿವಾರ್ (ಮೋದಿ ಕುಟುಂಬ) ಎಂದು ಬದಲಾಯಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಕ್ಯಾಬಿನೆಟ್ ಸಚಿವ ಅನುರಾಗ್ ಠಾಕೂರ್ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೀಗೆ ಹಲವು ಬಿಜೆಪಿ ನಾಯಕರು ಪ್ರೊಫೈಲ್‌ನ ಬಯೋದಲ್ಲಿ ಮೋದಿ ಕಾ ಪರಿವಾರ್ ಎಂದು ಬದಲಾಯಿಸಿದ್ದಾರೆ. ತೆಲಂಗಾಣದ ಆದಿಲಾಬಾದ್‌ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವೇ ನನ್ನ ಕುಟುಂಬ ಎಂದು ಹೇಳಿದ ಸಮಯದಲ್ಲಿ ಈ ಹಿರಿಯ ಬಿಜೆಪಿ ನಾಯಕರ ಎಕ್ಸ್-ಬಯೋದಲ್ಲಿನ ಈ ಬದಲಾವಣೆಯು ಕಂಡುಬಂದಿದೆ.
ಮೋದಿಯವರ ಮಾತನ್ನು ನೀವೊಮ್ಮೆ ಕೇಳಿ….

Exit mobile version