Home ನಮ್ಮ ಜಿಲ್ಲೆ ಚಿಕ್ಕಮಗಳೂರು ಪ್ರಪಾತಕ್ಕೆ ಉರುಳಿದ ಬಸ್‌: ಓರ್ವ ಮಹಿಳೆ ಸಾವು

ಪ್ರಪಾತಕ್ಕೆ ಉರುಳಿದ ಬಸ್‌: ಓರ್ವ ಮಹಿಳೆ ಸಾವು

0

ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಖಾಸಗಿ ಬಸ್ ಉರುಳಿ ಓರ್ವ ಮಹಿಳೆ ಸಾವಪ್ಪಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಚೀಕನಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದ್ದು ಯಲಹಂಕ ನಿವಾಸಿ ಸುರೇಖಾ (45) ಮೃತಪಟ್ಟಿದ್ದು, ಇನ್ನು ಐವರಿಗೆ ಗಾಯವಾಗಿದೆ, ಬೆಂಗಳೂರಿಂದ ಹೊರನಾಡಿಗೆ ಹೊರಟಿದ್ದ ಪ್ರವಾಸಿಗರ ಬಸ್ಸಿನಲ್ಲಿ 48ಕ್ಕೂ ಹೆಚ್ಚು ಪ್ರವಾಸಿಗರು ಇದ್ದರು. ಬೆಂಗಳೂರು-ಹಾಸನ-ಮೂಡಿಗೆರೆ ಮಾರ್ಗವಾಗಿ ಹೊರನಾಡಿಗೆ ಹೋಗುತ್ತಿದ್ದ ಬಸ್ ಬೆಳಗಿನ ಜಾವ 4:45 ಸಮಯದಲ್ಲಿ ಉರುಳಿದೆ. ಗಾಯಾಳುಗಳಿಗೆ ಮೂಡಿಗೆರೆ, ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version