Home ನಮ್ಮ ಜಿಲ್ಲೆ ಗದಗ ಪ್ರತಿಭಟನೆ ವೇಳೆ ಟೈರ್‌ಗೆ ಬೆಂಕಿ: ಕಾಲಿಗೆ ತಗುಲಿದ ಬೆಂಕಿ

ಪ್ರತಿಭಟನೆ ವೇಳೆ ಟೈರ್‌ಗೆ ಬೆಂಕಿ: ಕಾಲಿಗೆ ತಗುಲಿದ ಬೆಂಕಿ

0

ಗದಗ: ಮೀಸಲಾತಿ ಹೋರಾಟಕ್ಕಾಗಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಯಿತು. ಇದೇ ವೇಳೆ, ಪ್ರತಿಭಟನಾಕಾರರು ಟಯರ್​ಗೆ ಬೆಂಕಿ ಹಚ್ಚುವಾಗ ಕಾಲಿಗೆ ಬೆಂಕಿ ತಗುಲಿದ ಘಟನೆಯೂ ಸಂಭವಿಸಿತು.
ನಗರದ ಹಳೇ ಡಿಸಿ ಆಫೀಸ್ ಸರ್ಕಲ್ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಪಾಲಾ ಬದಾಮಿ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರು. ಹಳೆ ಜಿಲ್ಲಾಧಿಕಾರಿ ಕಚೇರಿ ಸರ್ಕಲ್ ಬಂದ್ ಮಾಡಿ ‌ಪ್ರತಿಭಟಿಸಿದರು. ಟೈಯರ್ ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಟಯರ್​ಗೆ ಹೊತ್ತಿದ್ದ ಬೆಂಕಿ ಆರಿಸಲು ಪೊಲೀಸರು ಮುಂದಾಗಿದ್ದಾರೆ. ಪೊಲೀಸರು ಬೆಂಕಿ ಆರಿಸಲು ಮುಂದಾಗುತ್ತಿದ್ದಂತೆ ಪಂಚಮಸಾಲಿ ಮುಖಂಡರು ಅಡ್ಡಿಪಡಿಸಿದ್ದಾರೆ. ಪೊಲೀಸರ ಜೊತೆಗೆ ವಾಗ್ವಾದ, ತಳ್ಳಾಟ ನಡೆಸಿದ್ದಾರೆ. ಟಯರ್ ದೂಡುವ ವೇಳೆ ಕಾಲಿಗೆ ಬೆಂಕಿಹೊತ್ತಿ ಕೆಲ ಕಾಲ ಪರದಾಟಪಡುವಂತಾಯಿತು.

Exit mobile version