Home ತಾಜಾ ಸುದ್ದಿ ಪ್ರಜ್ವಲ್ ರೇವಣ್ಣ ಪ್ರಕರಣ, ಬೇಕಂತಲೆ ತಡವಾಗಿ ಪ್ರಕರಣ ದಾಖಲು

ಪ್ರಜ್ವಲ್ ರೇವಣ್ಣ ಪ್ರಕರಣ, ಬೇಕಂತಲೆ ತಡವಾಗಿ ಪ್ರಕರಣ ದಾಖಲು

0

ಹುಬ್ಬಳ್ಳಿ: ಪ್ರಜ್ವಲ್‌ ರೇವಣ್ಣ ಪ್ರಕರಣ ವಿಚಾರದಲ್ಲಿ ಸಿದ್ದರಾಮಯ್ಯ ಬೇಕು ಅಂತಲೇ ತಡವಾಗಿ ಎಫ್ ಐ ಆರ್ ಮಾಡಿಸಿದ್ದಾರೆ. ಇಷ್ಟು ದಿನ ಆರಾಮವಾಗಿ ಮಲಗಿ ಈಗ ಬಿಜೆಪಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆ ಮಾನ ಮರ್ಯಾದೆ ಇದ್ದಿದ್ದರೇ ಈ ರೀತಿಯ ಮಾತನಾಡುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಪಿಗೆ ಡಿಪ್ಲಾಮಿಟಕ್ ವೀಸಾ, ಪಾಸ್ ಪೋರ್ಟ್‌ ಸಿಗುತ್ತದೆ ಇಷ್ಟು ಕೂಡ ಸಿಎಂ ಮತ್ತು ಡಿಸಿಎಂಗೆ ಗೊತ್ತಿಲ್ಲವಾ?. ಒಬ್ಬರ ಮೇಲೆ ಸಾಕಷ್ಟು ಆರೋಪ ಬರುತ್ತವೆ, ಪತ್ರ ಬರೆದ ವಿಚಾರ ಅಷ್ಟು ಸ್ಪಷ್ಟವಾಗಿಲ್ಲ. ಅದಕ್ಕೆ ಕನಿಷ್ಠ ಸಾಕ್ಷಿ ಸಿಗಬೇಕಿತ್ತು. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಷ್ಟೇ. ಆದರೆ, ಜೆಡಿಎಸ್ ನಾವು ನಡೆಸುತ್ತಿಲ್ಲ ಎಂದು ಅವರು ಹೇಳಿದರು.

ಸಚಿವ ದಿನೇಶ್ ಗುಂಡೂರಾವ್ ಅವರು ಸಂವೇದನಶೀಲ ರಾಜಕಾರಣಿ ಅಂತ ನಾನು ಭಾವಿಸಿದ್ದೆ. ಆದರೆ ಅವರು ಇತ್ತೀಚೆಗೆ ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.

Exit mobile version