Home ನಮ್ಮ ಜಿಲ್ಲೆ ಕೋಲಾರ ಪ್ರಜಾಧ್ವನಿ ಭಯ ಶುರುವಾಗಿದೆ

ಪ್ರಜಾಧ್ವನಿ ಭಯ ಶುರುವಾಗಿದೆ

0
DKS

ಕೋಲಾರ: ನಮ್ಮ ಬಸ್ ಯಾತ್ರೆ ಪಂಕ್ಚರ್ ಆಗುತ್ತೆ ಅಂತ ಕಾಯ್ತಿದ್ದಾರೆ, 50 ದಿನ ಕಾದು ನೋಡಿ. ನಮ್ಮ ಪ್ರಜಾಧ್ವನಿ ಯಾತ್ರೆ ಬಗ್ಗೆ ಅವರಿಗೆ ಭಯ ಉಂಟಾಗಿದೆ ಎಂದು ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿರುವ ಅವರು, ರಭಸವಾಗಿ ಆಪರೇಷನ್ ಕಮಲ ಮೂಲಕ ಸರ್ಕಾರ ರಚನೆ ಮಾಡಿದ್ರಲ್ವಾ, ಅವರ ಬಸ್ ಏನಾಯಿತು? ಜನರೇ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕೆಂದು ಸಂಕಲ್ಪ ಮಾಡಿದ್ದಾರೆ ಎಂದರು.
ಫೆ. 5ರಿಂದ ಬಿ.ಕೆ ಹರಿಪ್ರಸಾದ್ ನೇತೃತ್ವದಲ್ಲಿ ಕೋಸ್ಟಲ್ ಕರ್ನಾಟಕ ಭಾಗದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ರಮೇಶ್ ಕುಮಾರ್ ಕ್ಷೇತ್ರದ ಕಾರ್ಯ ನಿಮಿತ್ತ ಭಾಗಿಯಾಗಿಲ್ಲ ಎಂದರು. ಇನ್ನು ಸುಮಲತಾ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ನನ್ನೊಂದಿಗೆ ಮಾತುಕತೆ ನಡೆಸಿಲ್ಲ, ಆ ವಿಚಾರವೇ ಗೊತ್ತಿಲ್ಲ ಎಂದರು.

Exit mobile version