Home ಅಪರಾಧ ಪತ್ನಿಯೊಂದಿಗೆ ಜಗಳ ಮಾಡಿ ಹೊರಟಿದ್ದವ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿಬಿದ್ದ

ಪತ್ನಿಯೊಂದಿಗೆ ಜಗಳ ಮಾಡಿ ಹೊರಟಿದ್ದವ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿಬಿದ್ದ

0

ಬೆಳಗಾವಿ: ದಾಂಪತ್ಯ ಕಲಹದಿಂದ ಬೇಸತ್ತು ಆರಾಮವಾಗಿ ಐಶಾರಾಮಿಯಾಗಿ ಬದುಕುವುದಕ್ಕೆ ಹಣದೊಂದಿಗೆ ಗೋವಾಗೆ ಹೊರಟ ಮಹಾರಾಷ್ಟ್ರದ ಗುತ್ತಿಗೆದಾರನೊಬ್ಬ ಪೊಲೀಸರ ಅತಿಥಿಯಾದ ಘಟನೆ ನಗರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಈ ಗುತ್ತಿಗೆದಾರ 26 ಲಕ್ಷ ರೂ.ಗಳೊಂದಿಗೆ ಗೋವಾಕ್ಕೆ ಕಾರಿನಲ್ಲಿ ಹೊರಟಿದ್ದ ವೇಳೆ ಬೆಳಗಾವಿಯ ಕರ್ನಾಟಕ ಚೌಕ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಕಾರು ತಪಾಸಣೆಗೆ ಒಳಪಡಿಸಿದ್ದಾಗ 26 ಲಕ್ಷ ಹಣದೊಂದಿಗೆ ಸಿಕ್ಕಿ ಬಿದ್ದಿದಾನೆ.
ಗೂಗಲ್ ಮ್ಯಾಪ್ ನೋಡಿಕೊಂಡು ಗೋವಾಕ್ಕೆ ಹೊರಟಿದ್ದ ಇವರು ಚೆಕ್‌ಪೋಸ್ಟ್ ಬಳಿ ಸಿಕ್ಕಿಬಿದ್ದಿದ್ದಾರೆ. ಆದರೆ ತನ್ನ ಬಳಿ ಇರುವ ಅಷ್ಟು ಹಣಕ್ಕೂ ದಾಖಲೆ ಇದೆ. ತಾನು ಮುಂಬೈನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರನಾಗಿದ್ದು, ಮನೆಯಲ್ಲಿ ಪತ್ನಿಯೊಂದಿಗೆ ಕಲಹವಾದ ಕಾರಣ ಮನನೊಂದು ನೆಮ್ಮದಿ ಅರಸಿ ಗೋವಾಗೆ ಹೊರಟಿರುವುದಾಗಿ ಹೇಳಿದ್ದಾರೆ. ಆನ್‌ಲೈನ್ ಪೇಮಂಟ್ ಬೇಡ ಅನ್ನುವ ಕಾರಣಕ್ಕೆ ಹಣ ಕೊಂಡೊಯ್ಯುತ್ತಿದ್ದು, ಗೂಗಲ್ ಮ್ಯಾಪ್ ಕೈಕೊಟ್ಟು ಪಜೀತಿಗೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾನೆ. ಮಾರ್ಕೆಟ್ ಪೊಲೀಸರು ಆತನ ವಿಚಾರಣೆ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ.

Exit mobile version