Home ಅಪರಾಧ ಪತಿ ಜತೆ ಸೇರಿ ಪ್ರಿಯಕರನ ಮೇಲೆ ಚಾಕು ಇರಿತ

ಪತಿ ಜತೆ ಸೇರಿ ಪ್ರಿಯಕರನ ಮೇಲೆ ಚಾಕು ಇರಿತ

0

ಬೆಳಗಾವಿ: ಈಗಾಗಲೇ ಎರಡು ಮದುವೆಯಾಗಿರುವ ಮಹಿಳೆಯೊಬ್ಬಳು ತನ್ನ ಗಂಡನ ಜತೆ ಸೇರಿ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮಹಿಳೆಯನ್ನು ಶೋಭಾ ಎನ್ನಲಾಗುತ್ತಿದ್ದು, ಈಕೆ ತನ್ನ ಎರಡನೇ ಪತಿ ಮಂಜುನಾಥನೊಂದಿಗೆ ಬೆಳಗಾವಿಯಲ್ಲಿ ವಾಸವಿದ್ದಾಳೆ. ಈ ತನ್ಮಧ್ಯೆ ಬೆಂಗಳೂರಿನ ಆನಂದ ಎಂಬ ಯುವಕನ ಜತೆಯಲ್ಲಿ ಪ್ರೇಮದಲ್ಲಿ ಬಿದ್ದಿದ್ದಾಳೆ. ಆತನ ಜತೆ ಚಾಟಿಂಗ್ ಡೇಟಿಂಗ್ ಕೂಡಾ ನಡೆಸಿದ್ದಾಳೆ. ಆದರೆ ಕಳೆದ ೧೫ ದಿನಗಳಿಂದ ಆತನ ಜತೆ ಮಾತಿಗೆ ಸಿಗಲಿಲ್ಲ. ಇದರಿಂದ ಗಾಬರಿಯಾದ ಯುವಕ ನೇರವಾಗಿ ಆಕೆಯ ಭೇಟಿಗೆ ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದಾನೆ.
ಆದರೆ ದಿಢೀರ್ ಶೋಭಾ ಮನೆಗೆ ಬಂದವನಿಗೆ ಶಾಕ್ ಕಾದಿತ್ತು. ಆಕೆ ಮಂಜು ಜತೆಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾಳೆ. ಸಿಟ್ಟಿಗೆದ್ದವ ಶೋಭಾಳನ್ನು ನಿಂದಿಸಿ ಆಕೆಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಅಷ್ಟರಲ್ಲಿಯೇ ಶೋಭಾ ಮತ್ತು ಆಕೆಯ ಪತಿರಾಯ ಚಾಕುವಿನಿಂದ ಆನಂದನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಆನಂದ ಬೆಳಗಾವಿ ಬಿಮ್ಸ್‌ನ ಐಸಿಯುದಲ್ಲಿ ದಾಖಲಾಗಿದ್ದಾರೆ. ಆನಂದ್‌ನಿಂದ ಹಲ್ಲೆಗೊಳಗಾದ ಶೋಭಾಳನ್ನು ಗೋಕಾಕ ಆಸ್ಪತ್ರೆಗೆ ದಾಖಸಲಾಗಿದೆ. ಗೋಕಾಕ ಟೌನ್ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

Exit mobile version