Home ನಮ್ಮ ಜಿಲ್ಲೆ ನಾಲೆಗೆ ಉರುಳಿದ ಕಾರು: 4 ಮಂದಿ ಜಲಸಮಾಧಿ

ನಾಲೆಗೆ ಉರುಳಿದ ಕಾರು: 4 ಮಂದಿ ಜಲಸಮಾಧಿ

0

ಶ್ರೀರಂಗಪಟ್ಟಣ: ತಾಲ್ಲೂಕಿನ ಗಾಮನಹಳ್ಳಿ ಬಳಿಯ ವಿಸಿ ನಾಲೆಗೆ ಕಾರು ಉರುಳಿ ಬಾಲಕಿ ಸೇರಿದಂತೆ ನಾಲ್ಕು ಮಂದಿ ಸಾವನ್ನಪಿರುವ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ. ಶ್ರೀರಂಗಪಟ್ಟಣದ ಗಡಿ ಭಾಗ ಗಾಮನಹಳ್ಳಿ ಬಳಿಯ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಈ ಘಟನೆ ನಡೆದಿದೆ.
ಗಾಮನಹಳ್ಳಿಯಿಂದ ಬನ್ನೂರು ಮಾರ್ಗವಾಗಿ ವಿಸಿ ನಾಲೆ ಏರಿ ಮೇಲೆ ಹೋಗುವಾಗ ಕಾರು ನಾಲೆಗೆ ಉರುಳಿದೆ.
ಕಾರಿನಲ್ಲಿದ್ದ ಓರ್ವ ಬಾಲಕಿ ಸೇರಿ ಮೂವರು ಮಹಿಳೆಯರ ನೀರಿನಲ್ಲಿ ಮುಳುಗಿ ಮೃತರಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸ್ಥಳಕ್ಕೆ ಅರೆಕೆರೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಮಹದೇವಮ್ಮ ರೇಖಾ, ಸಂಜನಾ, ಮಮತಾ,ಮೃತ ದುರ್ದೈವಿಗಳು .ಮೃತರೆಲ್ಲಾ
ಮಳವಳ್ಳಿ ತಾಲೂಕಿನ ಡೋರನಹಳ್ಳಿ ಗ್ರಾಮದವರಾಗಿದ್ದು, ಕಾರು ಡ್ರೈವರ್ ಮನೋಜ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ರವಾನಿಸಲಾಗಿದೆ. ಮೊನ್ನೆಯಷ್ಟೆ ವಿ.ಸಿ ನಾಲೆಗೆ ಕಾರು ಬಿದ್ದು ಓರ್ವ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ದುರಂತ. ನಡೆದಿದೆ. ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು‌ ಮಾಡಿಕೊಳ್ಳಲಾಗಿದೆ.

Exit mobile version