Home ತಾಜಾ ಸುದ್ದಿ ದಿನಕ್ಕೊಂದು ಹಗರಣ, ಕ್ಷಣಕ್ಕೊಂದು ಅವ್ಯವಹಾರ ನಡೆಯದಿದ್ದರೆ…

ದಿನಕ್ಕೊಂದು ಹಗರಣ, ಕ್ಷಣಕ್ಕೊಂದು ಅವ್ಯವಹಾರ ನಡೆಯದಿದ್ದರೆ…

0

ಬೆಂಗಳೂರು: ಕೋಟಿ ಕೋಟಿ ಹಣ ಲೋಟಿಯಾಗಿರುವ ಹಗರಣಗಳ ಕುರಿತು ಪ್ರತಿಪಕ್ಷ ‌ನಾಯಕ ಆರ್. ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಭ್ರಷ್ಟಾಚಾರದ ಕೂಪವಾಗಿರುವ ಸಿಎಂ ಸಿದ್ದರಾಮಯ್ಯನವರ ಸರ್ಕಾರದಲ್ಲಿ ದಿನಕ್ಕೊಂದು ಹಗರಣ, ಕ್ಷಣಕ್ಕೊಂದು ಅವ್ಯವಹಾರ ನಡೆಯದಿದ್ದರೆ ತಿಂದ ಅನ್ನ ಜೀರ್ಣ ಆಗುವುದಿಲ್ಲ ಅನ್ನಿಸುತ್ತೆ. ಬಾಗಲಕೋಟೆಯ ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರಿಗೆ ಸೇರಬೇಕಿದ್ದ ₹2.83 ಕೋಟಿ ಹಣ ಲೋಟಿಯಾಗಿರುವ ಹಗರಣ ಬೆಳಕಿಗೆ ಬಂದಿದ್ದು, ಹಗಲಿರುಳು ತಮ್ಮ ದೇಹ ದಂಡಿಸಿ ಬೆವರು ಸುರಿಸಿ ದುಡಿಯುವ ಶ್ರಮಿಕರ ದುಡ್ಡಿಗೂ ಕನ್ನ ಹಾಕುವ ಈ ದರಿದ್ರ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು ಎಂದಿದ್ದಾರೆ.

Exit mobile version