Home ಅಪರಾಧ ತಾಯಿ, ಮಗಳು ಆತ್ಮಹತ್ಯೆ

ತಾಯಿ, ಮಗಳು ಆತ್ಮಹತ್ಯೆ

0

ಮಂಗಳೂರು: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಗರದಲ್ಲಿ ನಡೆದಿದ್ದು, ತಾಯಿ ಮತ್ತು ಒಬ್ಬ ಮಗಳು ಮೃತಪಟ್ಟರೆ, ಇನ್ನೋರ್ವ ಮಗಳು ಅಪಾಯದಿಂದ ಪಾರಾಗಿದ್ದಾಳೆ.
ನಗರದ ಕೊಡಿಯಾಲ್ ಗುತ್ತು ಬಳಿಯ ಮನೆಯಲ್ಲಿ ಸಂಜೆ ಘಟನೆ ನಡೆದಿದೆ. ವಿಜಯಾ(33) ಮತ್ತು ಶೋಭಿತಾ(4) ಮೃತಪಟ್ಟವರು. ಇಬ್ಬರು ಮಕ್ಕಳ ಜತೆಗೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು ಇನ್ನೋರ್ವ ಮಗಳು ಸಾವಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾಳೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು ತನಿಖೆ ನಡೆಯುತ್ತಿದೆ.

Exit mobile version