Home News ಡಿಕೆಶಿ ಹೇಳಿಕೆಗೆ ಮಾಜಿ ಸಚಿವ ರಾಯರೆಡ್ಡಿ ಸಮರ್ಥನೆ

ಡಿಕೆಶಿ ಹೇಳಿಕೆಗೆ ಮಾಜಿ ಸಚಿವ ರಾಯರೆಡ್ಡಿ ಸಮರ್ಥನೆ

ರಾಯಚೂರು: ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ ಅವರಿಗೆ ಅಧಿಕಾರವಿದೆ. ಕೆಲಸ ಮಾಡದವರಿಗೆ ಟಿಕೆಟ್ ನೀಡಲ್ಲ ಕೊಡಲ್ಲ ಅಂದಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಲ್‌ಪಿ ನಾಯಕರಿದ್ದಾರೆ ಎಲ್ಲರೂ ಟಿಕೆಟ್ ನಿರ್ಧಾರ ಮಾಡುತ್ತಾರೆ. ಎಲೆಕ್ಷನ್ ಕಮಿಟಿ ಟಿಕೆಟ್ ನೀಡುವ ನಿರ್ಧಾರ ಮಾಡುತ್ತೆ ಒಬ್ಬರ ನಿರ್ಧಾರ ಅಂತಿಮವಲ್ಲ. ಇದು ಡಿಕೆಶಿ, ಸಿದ್ದರಾಮಯ್ಯ ನಡುವೆ ಅಸಮಾಧಾನವಿದೆ ಎಂಬುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.
ಎಲ್ಲರೂ ಒಟ್ಟಿಗೆ ಕೂತು ನಿರ್ಧಾರ ಮಾಡುತ್ತಾರೆ ಅಧ್ಯಕ್ಷರಾಗಿ ಮಾತನಾಡಿದ್ದಾರೆ ಅಷ್ಟೇ. ಸಿದ್ದರಾಮಯ್ಯ ಮಾತನಾಡುವ ರೀತಿ ಬೇರೆ ಡಿಕೆಶಿ ಮಾತನಾಡುವ ರೀತಿ ಬೇರೆ. ಡಿಕೆಶಿ ಜೋರಾಗಿ ಮಾತನಾಡುತ್ತಾರೆ ಅದು ಅವರ ಶೈಲಿ ಅಷ್ಟೇ. ಸಿದ್ದರಾಮೊತ್ಸವ ಯಶಸ್ವಿಯಾಯ್ತು ಆದ್ರೆ ಟ್ರಾಫಿಕ್ ನಿರ್ವಹಣೆ ಆಗಲಿಲ್ಲ ಅನ್ನೋ ಡಿಕೆಶಿ ಹೇಳಿಕೆ ಪ್ರತಿಕ್ರಿಯಿಸಿ, ಅದಕ್ಕೇ ನಾವು ಏನು ಮಾಡಲು ಆಗುತ್ತದೆ, ಹೆಚ್ಚು ಜನ ಬಂದಿದ್ದಕ್ಕೆ ಪೊಲೀಸರಿಗೂ ಏನೂ ಮಾಡಲು ಆಗಲಿಲ್ಲ. ಅದಕ್ಕೆ ಡಿಕೆಶಿ ಟ್ರಾಫಿಕ್ ಮ್ಯಾನೇಜ್ ಮಾಡುವಲ್ಲಿ ಸೋತಿದ್ದೇವೆ ಎಂದಿದ್ದಾರೆ ಅದು ಕಾರ್ಯಕ್ರಮ ಸೋಲಲ್ಲ ಎಂದರು.

Exit mobile version