Home ತಾಜಾ ಸುದ್ದಿ ಟಾಟಾ ಮತ್ತು ಗರ್ಲ್‌ಫ್ರೆಂಡ್ಸ್‌

ಟಾಟಾ ಮತ್ತು ಗರ್ಲ್‌ಫ್ರೆಂಡ್ಸ್‌

0

ರತನ್ ಟಾಟಾ ಕೊನೆತನಕ ಮದುವೆಯಾಗಲಿಲ್ಲ. ಮದುವೆಯಾಗಬಾರದು ಎನ್ನುವ ಭಾವನೆ ರತನ್ ಅವರಿಗೆ ಇರಲಿಲ್ಲ. ಆದರೆ ಅದು ಕೈಗೂಡಲಿಲ್ಲ ಅಷ್ಟೆ. ಅವರಿಗೆ ಗರ್ಲ್ಫ್ರೆಂಡ್ಸ್ ಇದ್ದರು. ಇನ್ನೇನು ಮದುವೆ ಆಗೇ ಹೋಗುತ್ತೆ ಎನ್ನುವ ಹಂತದವರೆಗೆ ನಾಲ್ಕು ಸಂಬಂಧಗಳು ಕೂಡಿದ್ದವು. ಅವೆಲ್ಲ ಸಣ್ಣಪುಟ್ಟ ಕಾರಣಗಳಿಗೆ ಕೈಗೂಡದೇ ಹೋಯಿತು ಎಂದು ಟಾಟಾ ಅವರೇ ೨೦೧೧ರಲ್ಲಿ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದರು. ಲಾಸ್ ಏಂಜಲೀಸ್‌ನಲ್ಲಿದ್ದಾಗ ಅಮೆರಿಕದ ಒಬ್ಬ ಯುವತಿಯೊಡನೆ ಪ್ರೀತಿ ಚಿಗುರಿ ಮದುವೆಯಾಗುವ ಹಂತದವರೆಗೆ ಹೋಗಿತ್ತು. ಆದರೆ ಏಕಾಏಕಿ ಟಾಟಾ ಜೀವನದಲ್ಲಿ ಕೆಲವೊಂದು ಬದಲಾವಣೆಗಳಾದವು. ಹಾಗಾಗಿ ಆ ಸಂಬಂಧ ಮುರಿದುಬಿತ್ತು. ಇನ್ನೊಂದು ಸಂಬಂಧ ವ್ಯಾಪಕವಾಗಿ ಚರ್ಚೆಯಾಗಿರುವುದು ಬಾಲಿವುಡ್ ನಟಿ ಸಿಮಿ ಗರೇವಾಲ್ ಜೊತೆ ಟಾಟಾ ನಡೆಸಿದ ಡೇಟಿಂಗ್. ಈ ಕುರಿತು ಸಿಮಿಯೇ ಒಂದು ಸಂದರ್ಶನದಲ್ಲಿ ವಿವರಗಳನ್ನು ಬಹಿರಂಗಪಡಿಸಿದ್ದರು.

Exit mobile version