Home ಸುದ್ದಿ ದೇಶ ಟವರ್‌ ಏರಿದ ಬಾಲಕಿ: ಕೆಳಗಿಳಿಯುವಂತೆ ಮನವಿ ಮಾಡಿದ ಮೋದಿ

ಟವರ್‌ ಏರಿದ ಬಾಲಕಿ: ಕೆಳಗಿಳಿಯುವಂತೆ ಮನವಿ ಮಾಡಿದ ಮೋದಿ

0

ಹೈದರಾಬಾದ್: ಹೈದರಾಬಾದ್‌ನಲ್ಲಿ ಮೋದಿ ಭಾಷಣ ಮಾಡುತ್ತಿದ್ದ ವೇಳೆ ಬಾಲಕಿಯೊಬ್ಬಳು ಟವರ್‌ ಏರಿದ್ದು, ಇದನ್ನು ಕಂಡ ಮೋದಿ ಕೆಳಗೆ ಬರುವಂತೆ ಪದೇ ಪದೇ ವಿನಂತಿಸಿದ ಘಟನೆ ನಡೆದಿದೆ.
ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಶನಿವಾರ ಸಿಕಂದರಾಬಾದ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಪ್ರಧಾನಿ ಭಾಷಣದ ವೇಳೆ ಪರೇಡ್ ಮೈದಾನದಲ್ಲಿ ಲೈಟ್‌ಗಳನ್ನು ಅಳವಡಿಸಿದ್ದ ಟವರ್‌ ಮೇಲೆ ಯುವತಿ ಏರುತ್ತಿರುವುದನ್ನು ಗಮನಿಸಿದ ಅವರು ತಮ್ಮ ಭಾಷಣ ಮೊಟಕುಗೊಳಿಸಿ ಯುವತಿಯನ್ನು ಕೆಳಗೆ ಬರುವಂತೆ ಪ್ರಧಾನಿ ಪದೇ ಪದೇ ವಿನಂತಿಸಿದರು ಮತ್ತು ಟವರ್‌ ಸ್ಥಿತಿ ಚೆನ್ನಾಗಿಲ್ಲ ಎಂದೂ ಹೇಳಿದ್ದಾರೆ. ಈ ಘಟನೆಯ ವಿಡಿಯೋ ವೈರಲ್‌ ಆಗಿದೆ.

ಟವರ್‌ ಏರಿದ ಬಾಲಕಿ:  ಕೆಳಗಿಳಿಯುವಂತೆ ಮನವಿ ಮಾಡಿದ ಮೋದಿ

Exit mobile version