Home ಅಪರಾಧ ಜಮೀನು ವಿವಾದ, ಪರಸ್ಪರ ಹೊಡೆದಾಡಿ ಇಬ್ಬರೂ ಮೃತ

ಜಮೀನು ವಿವಾದ, ಪರಸ್ಪರ ಹೊಡೆದಾಡಿ ಇಬ್ಬರೂ ಮೃತ

0

ಬೆಳಗಾವಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಹೋದರರಿಬ್ಬರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು ಇಬ್ಬರೂ ಮೃತಪಟ್ಟ ಘಟನೆ ಅಥಣಿ ತಾಲುಕಿನಲ್ಲಿ ನಡೆದಿದೆ.

ಹಣಮಂತ ರಾಮಚಂದ್ರ ಖೋತ ( 34) ಮತ್ತು ಖಂಡೂಬಾ ತಾನಾಜಿ ಖೋತ ( 32) ಮೃತಪಟ್ಟವರು ಇಬ್ಬರೂ ಅಥಣಿ ತಾಲ್ಲೂಕಿನ ಖೋತವಾಡಿ ಗ್ರಾಮದವರು.

ಜಮೀನಿಗೆ ಸಂಭಂಧಿಸಿದಂತೆ ಇಬ್ಬರ ನಡುವೆ ಹಲವಾರು ದಿನಗಳಿಂದ ವಿವಾದ ನಡೆದಿತ್ತು, ಗ್ರಾಮದ ಹಿರಿಯರೂ ರಾಜಿ ಪಂಚಾಯತಿ ಮಾಡಿಸಿ ರಾಜಿ ಸಂಧಾನ ಮಾಡಿಸಿದ್ರು ಆದರೂ ಸಹ ನಿನ್ನೆ ರಾತ್ರಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದರು. ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾರೆ.

Exit mobile version