Home ತಾಜಾ ಸುದ್ದಿ ಜನರಿಗೆ `ಗ್ಯಾರಂಟಿ’ ವಿಶ್ವಾಸ ಇಲ್ಲ

ಜನರಿಗೆ `ಗ್ಯಾರಂಟಿ’ ವಿಶ್ವಾಸ ಇಲ್ಲ

0

ಹಾವೇರಿ: ದೇಶಾದ್ಯಂತ ನರೇಂದ್ರ ಮೋದಿಯವರ ಪರ ಅಲೆ ಇದ್ದು, ಅವರ ಗ್ಯಾರಂಟಿ ಮುಂದೆ ಕಾಂಗ್ರೆಸ್‌ನ ತಾತ್ಕಾಲಿಕವಾದ ಗ್ಯಾರಂಟಿ ಬಗ್ಗೆ ಜನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬುಧವಾರ ಬಸವರಾಜ ಬೊಮ್ಮಾಯಿ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಹಂಬಲ ಜನರಲ್ಲಿ ಕಂಡುಬರುತ್ತಿದೆ. ಅವರ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯದ ಪರಿಣಾಮ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಸ ದಾಖಲೆ ಸೃಷ್ಟಿ ಮಾಡುತ್ತದೆ. ನನಗಿಂತ ನಮ್ಮ ಕಾರ್ಯಕರ್ತರು ವಿಶ್ವಾಸದಲ್ಲಿದ್ದಾರೆ ಎಂದರು.
ದಿಂಗಾಲೇಶ್ವರ ಸ್ವಾಮೀಜಿ ಅವರ ಮನವೊಲಿಕೆ ಬಗ್ಗೆ ನಾನೇ ಅವರ ಬಳಿ ಮಾತಾಡಿದ್ದೇನೆ. ಯಡಿಯೂರಪ್ಪನವರೂ ಶ್ರೀಗಳ ಬಳಿ ಮಾತನಾಡಿದ್ದಾರೆ. ಇನ್ನೂ ಸಮಯ ಇದೆ ಮಾತಾಡುತ್ತೇನೆ ಎಂದರು.

Exit mobile version