Home ತಾಜಾ ಸುದ್ದಿ ಚಂದನ್​ ಶೆಟ್ಟಿಯ ‘ಸೂತ್ರಧಾರಿ’ ಟ್ರೈಲರ್ ಅನಾವರಣ

ಚಂದನ್​ ಶೆಟ್ಟಿಯ ‘ಸೂತ್ರಧಾರಿ’ ಟ್ರೈಲರ್ ಅನಾವರಣ

0

ಬೆಂಗಳೂರು: ಗಾಯಕ್‌, ನಾಯಕ ಚಂದನ್ ಶೆಟ್ಟಿ ಅಭಿನಯದ ಸೂತ್ರಧಾರಿ ಸಿನಿಮಾದ ಟ್ರೈಲರ್ ಅನಾವರಣಗೊಂಡಿದೆ.
ನಾಯಕ ಚಂದನ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟಿಪಿಕಲ್ ಕೇಸ್ ಒಂದರ ಅನಾವರಣ ಮಾಡಲಿದ್ದಾರೆ, ಚಿತ್ರದಲ್ಲಿ ನಡೆಯುವ ಹಲವು ಕೊಲೆಗಳ ಹಿಂದಿನ ಸೂತ್ರಧಾರಿ ಯಾರು ಎಂಬ ಪ್ರಶ್ನೆಯನ್ನು ಟ್ರೈಲರ್‌ನಲ್ಲಿ ಸಹ ಮೂಡಿಸಿದ್ದಾರೆ. ಈ ಚಿತ್ರದಲ್ಲಿ ಕಿರಣ್ ಕುಮಾರ್ ಆ್ಯಕ್ಷನ್​ ಕಟ್​ ಹೇಳಿದ್ದು, ಚಂದನ್ ಶೆಟ್ಟಿ ಜೊತೆಗೆ ನಾಯಕಿಯಾಗಿ ಅಪೂರ್ವ ಅಭಿನಯಿಸಿದ್ದಾರೆ. ಇವರ ಜೊತೆ ನಟ ತಬಲ ನಾಣಿ ಹಾಗೂ ಹಾಡು ಬರೆದಿರುವ ವಿಜಯ್ ಈಶ್ವರ್ ಮೊದಲಾದವರು ನಟಿಸಿದ್ದಾರೆ. ಚಿತ್ರ ತಂಡ ಮೇ 9ರಂದು ಈ ಬಹುನಿರೀಕ್ಷಿತ ಚಿತ್ರವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

Suthradaari Official Trailer |Chandan Shetty,Apurva,Sanjana Anand |Navarasan |Kiran Kumar R|A2 Music

Exit mobile version