Home ತಾಜಾ ಸುದ್ದಿ ಗುಂಡಿಕ್ಕಿ ಕ್ರಮ ಕೈಗೊಂಡರೆ ಗೋವಧೆ ನಿಲ್ಲಿಸಲು ಸಾಧ್ಯ

ಗುಂಡಿಕ್ಕಿ ಕ್ರಮ ಕೈಗೊಂಡರೆ ಗೋವಧೆ ನಿಲ್ಲಿಸಲು ಸಾಧ್ಯ

0

ಮಂಗಳೂರು: ಮಂಗಳೂರಿನಲ್ಲಿ ನಗರ ಪ್ರದೇಶದಲ್ಲಿಯೇ ಗೋವುಗಳನ್ನು ವಧೆ ಮಾಡಲಾಗುತ್ತಿದ್ದು ಸಚಿವ ಮಂಕಾಳ ವೈದ್ಯ ಹೇಳಿದಂತೆ ಆರೋಪಿಗಳ ಮೇಲೆ ಗುಂಡಿಕ್ಕಿ ಕ್ರಮ ಕೈಗೊಂಡರೆ ಗೋ ವಧೆ ನಿಲ್ಲಿಸಲು ಸಾಧ್ಯ. ಪೊಲೀಸರು ಸಚಿವರ ಸಲಹೆ ಪಾಲನೆ ಮಾಡಲು ಮುಂದಾಗಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಮಂಗಳೂರಿನ ಅಳಕೆಯಲ್ಲಿ ಅಕ್ರಮ ಗೋ ವಧೆ ಕೇಂದ್ರವನ್ನು ಮೇಯರ್ ಮನೋಜ್ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಪತ್ತೆ ಮಾಡಿದನ್ನು ಶ್ಲಾಘಿಸುತ್ತೇನೆ. ದರೋಡೆಕೋರರ ವಿರುದ್ಧ ಫೈರಿಂಗ್ ಮಾಡುವ ಪೊಲೀಸರು ಅಕ್ರಮ ಗೋ ಸಾಗಾಟಗಾರರ ವಿರುದ್ಧವು ಇಂಥ ಕ್ರಮ ಕೈಗೊಂಡರೆ ತಾನಾಗಿಯೇ ಕಡಿಮೆ ಆಗುವುದರಲ್ಲಿ ಸಂಶಯವಿಲ್ಲ. ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಬಿಜೆಪಿ ಸರ್ಕಾರ ಆಸ್ತಿ ಮುಟ್ಟುಗೋಲು ಕ್ರಮ ಜಾರಿಗೆ ತಂದು ಅಕ್ರಮ ಗೋ ವದೆ ಮಾಡುವವರ ವಿರುದ್ಧ ಕ್ರಮ ಕೈಗೊಂಡಿದೆ. ನನ್ನ ಕ್ಷೇತ್ರದಲ್ಲಿಯೇ ಹಲವು ಪ್ರಕರಣ ದಾಖಲಿಸಿ ಆಸ್ತಿ ಮುಟ್ಟುಗೋಲು ಹಾಕಿಸಿದ್ದೇನೆ.
ಕಾಂಗ್ರೆಸ್ ಸರ್ಕಾರ ಮಾತ್ರ ಗೋ ವಧೆ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡಿದ್ದು ಮತ್ತೆ ಕಸಾಯಿಖಾನೆಗಳು ತಲೆ ಎತ್ತಿವೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಆರೋಪಿಸಿದ್ದಾರೆ.

Exit mobile version