Home ತಾಜಾ ಸುದ್ದಿ ಗಾಂಜಾ ಮಾರಾಟ ೧೩ ಜನರ ಬಂಧನ: ಒಂದು ಕೆಜಿ ಗಾಂಜಾ ವಶ

ಗಾಂಜಾ ಮಾರಾಟ ೧೩ ಜನರ ಬಂಧನ: ಒಂದು ಕೆಜಿ ಗಾಂಜಾ ವಶ

0

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಮಾರಾಟಕ್ಕೆ ಸಹಾಯ ಮಾಡಿದವರನ್ನು ಸೇರಿ ೧೩ ಜನರನ್ನು ಬಂಧಿಸಿ ೧ ಕೆಜಿ ೨೭ ಗ್ರಾಂ ಗಾಂಜಾ ವಶಪಡಿಸಿಕೊಂಡಿರುವ ಘಟನೆ ಸೋಮವಾರ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೀರಜ್‌ನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ನವಾಜ್ ಮತ್ತು ಅಹ್ಮದ್‌ಖಾನ್ ಎಂಬುವರು ಸೇರಿ ೧೧ ಜನರನ್ನು ಬಂಧಿಸಲಾಗಿದೆ. ಆರೋಪಿತರಿಂದ ಎರಡು ಬೈಕ್, ಆರು ಸಾವಿರ ಹಣ, ಮೂರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ಶಹರ ಠಾಣೆ ಪೊಲೀಸರು ಗಾಂಜಾ ವಶಪಡಿಸಿಕೊಂಡಿದ್ದಾರೆ.

Exit mobile version