Home ಅಪರಾಧ ಕ್ಯಾಂಪ್ ಠಾಣೆ ಆವರಣದಲ್ಲಿ ಅಪರಿಚಿತ ಶವ ಪತ್ತೆ

ಕ್ಯಾಂಪ್ ಠಾಣೆ ಆವರಣದಲ್ಲಿ ಅಪರಿಚಿತ ಶವ ಪತ್ತೆ

0
crime

ಬೆಳಗಾವಿ: ಅನುಮಾನಾಸ್ಪದ ವ್ಯಕ್ತಿಯ ಶವವೊಂದು ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದ ಸಂಚಾರಿ ಪೊಲೀಸ್ ಠಾಣಾ ಆವರಣದಲ್ಲಿ ಪತ್ತೆಯಾಗಿದೆ.
ಜಪ್ತಿ ಮಾಡಿ ನಿಲ್ಲಿಸಿದ್ದ ಬಸ್ ಹಿಂಬದಿಯ ಸೀಟ್‌ನಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಂದಾಜು ೪೦-೪೫ ವರ್ಷದ ವ್ಯಕ್ತಿಯದ್ದು ಎಂದು ಹೇಳಲಾಗಿದೆ. ಕಳೆದ ೧೫ ದಿನಗಳ ಹಿಂದೆಯೇ ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕ್ಯಾಂಪ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದು ಕೊಲೆಯೋ ಅಥವಾ ಸಹಜ ಸಾವೋ ಎಂಬುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version