Home ಅಪರಾಧ ಕೃಷ್ಣಮೃಗದ ಕೊಂಬು, ಚರ್ಮ ಮಾರಾಟ: ಓರ್ವನ ಬಂಧನ

ಕೃಷ್ಣಮೃಗದ ಕೊಂಬು, ಚರ್ಮ ಮಾರಾಟ: ಓರ್ವನ ಬಂಧನ

0

ದಾವಣಗೆರೆ: ಕೃಷ್ಣ ಮೃಗದ ಕೊಂಬು ಹಾಗೂ ಚರ್ಮ‌ ಮಾರಾಟ ಜಾಲವನ್ನು ಶುಕ್ರವಾರ ಪೊಲೀಸರು ಪತ್ತೆ ಮಾಡಿ, ಓರ್ವನನ್ನು ಬಂಧಿಸಿರುವ ಘಟನೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ‌.
ಪ್ರಕರಣದ ಆರೋಪಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದ ಮಲ್ಲಪ್ಪ ಮಾಂಡಾಳಿ(46) ಬಂಧಿತ ಆರೋಪಿ. ಪೊಲೀಸ್ ಅರಣ್ಯ ಸಂಚಾರಿ ದಳದ ಕಾರ್ಯಾಚರಣೆಯಿಂದ ಪ್ರಕರಣ ಪತ್ತೆಯಾಗಿದ್ದು, ಎರಡು ಕೃಷ್ಣ ಮೃಗದ ಕೊಂಬು ಹಾಗೂ ಮೂರು ಕೃಷ್ಣ ಮೃಗದ ಚರ್ಮವನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಗರಗ ಕ್ರಾಸ್ ಬಳಿ ಹೊಟೇಲ್​ನಲ್ಲಿ ಕೃಷ್ಣ ಮೃಗದ ಕೊಂಬು ಹಾಗೂ ಚರ್ಮ ಮಾರಾಟ ಮಾಡುವ ವೇಳೆ ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Exit mobile version