Home ನಮ್ಮ ಜಿಲ್ಲೆ ಕೊಪ್ಪಳ ಕುಷ್ಟಗಿಯಲ್ಲಿ ಚಿತ್ರನಟ ಕಿಚ್ಚ ಸುದೀಪ ರೋಡ್‌ ಶೋ

ಕುಷ್ಟಗಿಯಲ್ಲಿ ಚಿತ್ರನಟ ಕಿಚ್ಚ ಸುದೀಪ ರೋಡ್‌ ಶೋ

0

ಕೊಪ್ಪಳ(ಕುಷ್ಟಗಿ): ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಅವರ ಪರವಾಗಿ ಚಿತ್ರನಟ ಕಿಚ್ಚ ಸುದೀಪ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಕುಷ್ಟಗಿಯ ಮಲ್ಲಯ್ಯ ವೃತ್ತದಿಂದ ಪ್ರಾರಂಭವಾದ ರೋಡ್‌ ಶೋ ಬಸ್‌ಸ್ಟ್ಯಾಂಡ್ ರೋಡ್, ಮಾರುತಿ ವೃತ್ತ ಮೂಲಕ ಹಾಯ್ದು ಬಸವೇಶ್ವರ ವೃತ್ತದಲ್ಲಿ ಮುಕ್ತಾಯವಾಯಿತು.
ಈ ವೇಳೆ ಮಾತನಾಡಿದ ಕಿಚ್ಚ ಸುದೀಪ, ಸಹೋದರ ದೊಡ್ಡನಗೌಡ ಪಾಟೀಲರು ಈಗಾಗಲೇ ಈ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮೂರನೇ ಭಾರಿಯು ಸಹಿತ ಅತ್ಯಂತ ಹೆಚ್ಚು ಮತಗಳನ್ನು ನೀಡುವ ಮೂಲಕ ಗೆಲ್ಲಿಸಿ ತರಬೇಕು ಎಂದು ಮನವಿ ಮಾಡಿದರು.

Exit mobile version