Home ಅಪರಾಧ ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶ: ಯುವಕ ಸಾವು

ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶ: ಯುವಕ ಸಾವು

0

ಧಾರವಾಡ : ವಿದ್ಯುತ್ ಸ್ಪರ್ಶಗೊಂಡು ಯುವಕ ಮೃತಪಟ್ಟ ಘಟನೆ ಸಮೀಪದ ರಾಯಾಪುರ ಇಸ್ಕಾನ್ ಟೆಂಪಲ್ ಹತ್ತಿರ ಸಂಭವಿಸಿದೆ.

ಮೃತ ಯುವಕ ಕರಡಿಕೊಪ್ಪ ಗ್ರಾಮದ ಮಹಮ್ಮದ್ ಅಲಿ ಗಡಾದ್ (24) ಎಂಬುವರಾಗಿದ್ದಾರೆ.

ಮಹಮ್ಮದ್ ಅವರು ವಿದ್ಯುತ್ ಗುತ್ತಿಗೆದಾರ ರಾಜೇಶ್ ಎಂಬುವರ ಬಳಿ ಕೆಲಸ ಮಾಡುತ್ತಿದ್ದರು.ಹೆಸ್ಕಾಂನಿಂದ ಕಾಮಗಾರಿಗೆ ಎಲ್ ಸಿ( ಲೈನ್ ಕ್ಲಿಯರನ್ಸ್ ). ಸಿಕ್ಕಿದೆ ಎಂದು ಹೇಳಿ ಮಹಮ್ಮದ್ ಅವರಿಂದ ಕಂಬ ಹಾಕಿಸುವ ಕೆಲಸ ಮಾಡುತ್ತಿದ್ದರಂತೆ. ಈ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಮೃತಪಟ್ಟಿದ್ದಾನೆ.

ಗುತ್ತಿಗೆದಾರ ಎಲ್ ಸಿ ಪಡೆದಿರಲಿಲ್ಲ. ಒಂದು ವೇಳೆ ಎಲ್ ಸಿ ಪಡೆದಿದ್ದರೆ ಕಾಮಗಾರಿ ಮುಗಿಯುವವರೆಗೆ ವಿದ್ಯುತ್ ಸಂಪರ್ಕ ಆ ಮಾರ್ಗದಲ್ಲಿ ಕಡಿತ ಗೊಳಿಸಲಾಗಿರುತ್ತಿತ್ತು. ಎಲ್ ಸಿ ಪಡೆಯದೇ ಕೆಲಸ ಮಾಡಿಸುವ ವೇಳೆ ಈ ಅವಘಡ ಸಂಭವಿಸಿದೆ ಎಂದು ದೂರಲಾಗಿದೆ.

ಆದರೆ, ಗುತ್ತಿಗೆದಾರ ಆರೋಪ ಅಲ್ಲಗಳೆದಿದ್ದು, ತಾನು ಎಲ್ ಸಿ ಪಡೆದಿದ್ದು, ಹೆಸ್ಕಾಂ ಲೈನ್ ಮೆನ್ ವಿದ್ಯುತ್ ಕಡಿತಗೊಳಿಸದೇ ಇದ್ದುದ್ದೇ ಯುವಕನ ಸಾವಿಗೆ ಕಾರಣ ಎಂದು ದೂರಿದ್ದಾರೆ.

ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Exit mobile version