Home ನಮ್ಮ ಜಿಲ್ಲೆ ಕಟ್ಟಡ ಕುಸಿದು ಕಾರ್ಮಿಕ ಸಾವು

ಕಟ್ಟಡ ಕುಸಿದು ಕಾರ್ಮಿಕ ಸಾವು

0

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಅಡಿಪಾಯ ತೆಗೆಯುವ ವೇಳೆ ಪಕ್ಕದ ಅಪಾರ್ಟಮೆಂಟ್‌ನ ಕಂಪೌಂಡ್ ಗೋಡೆ ಕುಸಿದಿದ್ದರಿಂದ ಪರಿಣಾಮವಾಗಿ ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆ ಮಾರುತಿ ನಗರದಲ್ಲಿ ನಡೆದಿದೆ.
ಇಬ್ಬರು ಕಾರ್ಮಿಕರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು. ಬಿಹಾರ ಮೂಲದ ರಂಜನ್(೨೦) ಎಂಬ ಕಾರ್ಮಿಕ ಮೃತಪಟ್ಟಿದ್ದು, ಮತ್ತೋರ್ವ ಕಾರ್ಮಿಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಳ ಗುಂಡಿ ತೆಗೆಯುತ್ತಿದ್ದಾಗ ಪಕ್ಕದಲ್ಲಿರೋ ಅಪಾರ್ಟಮೆಂಟ್‌ನ ಕಾಂಪೌಡ್‌ಗೆ ಜೆಸಿಬಿ ಬಡಿದಿದ್ದರಿಂದ ಗೋಡೆ ಕುಸಿದಿದ್ದರಿಂದ ಮಣ್ಣು ಕಾರ್ಮಿಕರ ಮೇಲೆ ಬಿದ್ದು ಅವಘಡ ಸಂಭವಿಸಿದೆ. ಈ ಕುರಿತು ಎಸ್‌ಜಿ ಪಾಳ್ಯ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Exit mobile version