Home ತಾಜಾ ಸುದ್ದಿ ಕಂಠೀರವ ಸ್ಟೇಡಿಯಂಗೆ ಡಿಕೆಶಿ ಭೇಟಿ : ನಾಳೆ ಸಿಎಂ, ಡಿಸಿಎಂ ಪದಗ್ರಹಣ

ಕಂಠೀರವ ಸ್ಟೇಡಿಯಂಗೆ ಡಿಕೆಶಿ ಭೇಟಿ : ನಾಳೆ ಸಿಎಂ, ಡಿಸಿಎಂ ಪದಗ್ರಹಣ

0

ಬೆಂಗಳೂರು : ಯಾರೂ ಆಹ್ವಾನ ಪತ್ರಿಕೆಗೆ ಕಾಯಬೇಕಾಗಿಲ್ಲ ಎಲ್ಲರೂ ಬರಬಹುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ, ನಗರದ ಕಂಠೀರವ ಸ್ಟೇಡಿಯಂಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು ನಾಳೆ ಸಿಎಂ, ಡಿಸಿಎಂ ಪದಗ್ರಹಣ ಕಾರ್ಯಕ್ರಮ ಇರುವ ಹಿನ್ನಲೆಯಲ್ಲಿ ಏನೇನು ಸಿದ್ಧತೆ ನಡೆದಿದೆ ಎಂದು ನೋಡಲಿಕ್ಕೆ ಕಂಠೀರವ ಸ್ಟೇಡಿಯಂಗೆ ಬಂದಿದ್ದೇನೆ ಎಂದು ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೇಳಿದರು.

ಕಂಠೀರವ ಕ್ರೀಡಾಂಗಣ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್: 1,500 ಕ್ಕೂ ಹೆಚ್ಚು ಪೊಲೀಸರು ಹತ್ತು ಮಂದಿ ಎಸಿಪಿ, 28 ಮಂದಿ ಇನ್ಸ್ಪೆಕ್ಟರ್ಸ್ ನೇತೃತ್ವದಲ್ಲಿ ಭದ್ರತೆ ಇರಲಿದೆ. ಎಂಟು ಗೇಟ್​ಗಳಲ್ಲಿ ಓರ್ವ ಎಸಿಪಿ ರ್ಯಾಂಕ್ ಅಧಿಕಾರಿಗಳು ಭದ್ರತೆಯ ನೇತೃತ್ವ ವಹಿಸಲಿದ್ದು, 500 ಮಂದಿ ಸಂಚಾರಿ ಪೊಲೀಸರು ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

Exit mobile version