Home ಅಪರಾಧ ಒಂದೇ ಫಾರಂನಲ್ಲಿ ಮೂರು ಸಾವಿರ ಕೋಳಿಗಳ ಸಾವು

ಒಂದೇ ಫಾರಂನಲ್ಲಿ ಮೂರು ಸಾವಿರ ಕೋಳಿಗಳ ಸಾವು

0

ವಿಜಯನಗರ: ಒಂದೇ ಕೋಳಿ ಫಾರಂನಲ್ಲಿನ ಮೂರು ಸಾವಿರ ಕೋಳಿಗಳು ಇದ್ದಕ್ಕಿದ್ದಂತೆ ಮೃತಪಟ್ಟಿ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಬಳಿಯ ಖಂಡಿಕೇರಿ ತಾಂಡಾ ನಿವಾಸಿ ಪರಮೇಶ್ ‌ನಾಯ್ಕ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿ ಈ ಘಟನೆ ನಡೆದಿದೆ, ಪರಮೇಶ್ ನಾಯ್ಕ ಇತ್ತಿಚೆಗೆ ಕಳೆದ ಕಳೆದ ಮೂರು ತಿಂಗಳ ಹಿಂದೆ ಕೋಳಿ ಫಾರ್ಮ ಆರಂಭಿಸಿದ್ದರು, ಇದ್ದಕ್ಕಿದ್ದಂತೆ ಮೂರು ಸಾವಿರ ಕೋಳಿ ಮೃತಪಟ್ಟಿದನ್ನು ಕಂಡು ಕಂಗಾಲದ ಪರಮೇಶನ ಕೋಳಿ ಫಾರ್ಮಗೆ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೋಳಿಗಳ ಮಾದರಿ ಸಂಗ್ರಹಿಸಿದ್ದಾರೆ. ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಿಲ್ಲ. ವಿಷಪುರಿತ ಆಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಮಾದರಿ ಸಂಗ್ರಹಿಸಲಾಗಿದ್ದು, ಕೋಳಿಗಳ ಸಾವಿಗೆ ನಿಖರ ಕಾರಣ ‌ಪತ್ತೆಗೆ‌ ಕ್ರಮಕೈಗೊಳ್ಳಿತ್ತೇವೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಇನ್ನು ಸ್ಥಳಿಯರಲ್ಲಿ ಇದ್ದಕ್ಕಿದ್ದಂತೆ ಮೂರು ಸಾವಿರ ಕೋಳಿ ಸಾವನ್ನಪ್ಪಿದ್ದರಿಂದ ಆತಂಕ ಸುರುವಾಗಿದೆ.

Exit mobile version