Home ವೈವಿಧ್ಯ ಸಂಪದ ಎಲ್ಲೆಲ್ಲಿ ಭಗವದಂಶವೋ ಅಲ್ಲಲ್ಲಿ ಹರಿ ಸನ್ನಿವಾಸ…

ಎಲ್ಲೆಲ್ಲಿ ಭಗವದಂಶವೋ ಅಲ್ಲಲ್ಲಿ ಹರಿ ಸನ್ನಿವಾಸ…

0

ಹೊಟ್ಟೆಗಿಲ್ಲ ಎನ್ನುವುದರ ಹಿಂದೆ ಭಗವಂತನ ಹೆಸರು ಬರಬೇಕು. ಅಚ್ಯುತನ ಸತ್ಕಥೆ ಬರಬೇಕು. ನನ್ನತ್ರ ಹಣವಿಲ್ಲ ಕೊಡಿ, ಹೊಟ್ಟೆಗೆ ಹಸಿವಾಗಿದೆ ಆಹಾರ ಕೊಡಿ ಎಂದು ಕೇಳಿದರೆ ಅಂಬರೀಶ ಮಹಾರಾಜ ಕೇಳಿಸಿ ಕೊಳ್ಳುತ್ತಿರಲಿಲ್ಲ.
ದೇವರ ಆಜ್ಞೆಯಂತೆ ನಾನು ದಾನ ಮಾಡಲಿಲ್ಲ. ನನಗೆ ಸರಿಯಾದ ಶಿಕ್ಷೆಯನ್ನು ಕೊಟ್ಟು ನನ್ನನ್ನು ಸನ್ಮಾರ್ಗ ತರಿಸುವದಕ್ಕೋಸ್ಕರ ಈ ತಾಪತ್ರಯ, ಒದ್ದಾಟವನ್ನು ಕೊಟ್ಟು ಅದನ್ನು ಪರಿಹಾರ ಮಾಡುವುದಕ್ಕೆ ದಯಾಳುವಾದ ದೇವರು ನಿನ್ನಂತಹ ಉದಾರವಾದ ರಾಜನನ್ನು ಈ ಧರೆಗೆ ಕೊಟ್ಟು ಅನುಗ್ರಹ ಮಾಡಿದ್ದಾನೆ.
ದೇವರ ಪ್ರೇರಣೆಯಂತೆ ನನಗೊಂದು ಎರಡು ಕಾಸನ್ನು ಕೊಟ್ಟು ಉದ್ಧಾರ ಮಾಡು ಎಂದು ಹೀಗೆ ಭಿಕ್ಷುಕ ಅಂಬರೀಶ ರಾಜನನ್ನು ಕೇಳಬೇಕಿತ್ತು. ದಯಾಳುವಾದ ದೇವರು ಕಷ್ಟ ಮಾತ್ರ ಕೊಟ್ಟು ಕೈಕಟ್ಟಿ ಕುಳಿತಿಲ್ಲ. ನಿನ್ನಂತಹ ಉದಾರವಾದ ಸಂಪತ್ತು, ಔದಾರ್ಯ ಎಲ್ಲ ಗುಣಗಳ ರೂಪದಲ್ಲಿ ಅಂತರ್ಯಾಮಿಯಾಗಿ ರಾಜನಾದ ನಿನ್ನಲ್ಲಿ ನಿಂತು ಕಾರ್ಯ ಮಾಡಿಸುತ್ತಾನೆ ಎಂದೇ ನಂಬಬೇಕು ಎಂಬುದು ಹರಿಚಿಂತನೆಯಾಗುತ್ತದೆ. ಮನುಷ್ಯ ಇಷ್ಟಲ್ಲಾ ವ್ಯಾಪಾರ ಮಾಡಲು ಸಾಧ್ಯವೇ? ಇಲ್ಲ ಹೀಗೆ ಆ ಶಕ್ತಿ ಇಲ್ಲದಿರುವಾಗ ತಾನು ಎಷ್ಟು ದೊಡ್ಡವನೆಂದುಕೊಳ್ಳಬೇಕು..? ದೇವರೆಲ್ಲಿ ಮನುಷ್ಯನೆಲ್ಲಿ. ಆದರೆ ದೇವರ ಸ್ಥಾನದಿಲ್ಲಿದ್ದು, ನಾವೇ ದೇವರು ಎನ್ನುವದು ಉಚಿತವಲ್ಲ.
ಇದು ವ್ಯವಹಾರದಲ್ಲಿ ಹೇಗೆ ದೇವರ ಮಹಿಮೆಯನ್ನು ಅಳವಡಿಸಿಕೊಳ್ಳಬೇಕು ಎನ್ನುವುದು. ಭಗವಂತ ನೀರಿನ ಸ್ವರೂಪದಲ್ಲಿದ್ದಾರೆ ಆ ನೀರು, ರುಚಿಯಾಗಿ, ಹಿತವಾಗಿ ಆರೋಗ್ಯಕರವಾಗಿ, ಪಾಚಕವಾಗಿ ಚೈತನ್ಯವನ್ನು ತುಂಬುವಂತೆ ಆ ನೀರು ನಮ್ಮ ದೇಹದಲ್ಲಿ ಕೆಲಸ ಮಾಡುತ್ತದೆ. ಆ ತರಹದ ರಸನಾಗಿ ನಮ್ಮೆಲ್ಲರ ದೇಹದಲ್ಲಿ ಆ ನೀರನ್ನ ಆ ಸದ್ಗುಣಗಳನ್ನು ನೀರಿನಲ್ಲಿ ಇಟ್ಟು ದೇವರು ಸೃಷ್ಟಿ ಮಾಡಿದ್ದಾನೆ.
ಈ ರೀತಿಯಾಗಿ ನೀರಡಿಸಿದವನಿಗೆ ನೀರನ್ನು ಕೊಡುವಾಗ ಇಷ್ಟೊಂದು ಅನುಷ್ಠಾನವನ್ನು ಮಾಡಿಕೊಳ್ಳಬೇಕು. ಕೇಳುವವನು ಹಾಗೆ ಕೇಳಬೇಕು. ಈ ರೀತಿಯ ಬೆಳವಣಿಗೆ ಅಂಬರೀಶ ಚಕ್ರವರ್ತಿಯ ರಾಜ್ಯದಲ್ಲಿತ್ತು ಎಂಬುದನ್ನು ನಾವು ಭಾಗವತದಲ್ಲಿ ಓದುವಾಗ ಗಮನಿಸಬೇಕಾದ ಅಂಶ. ಇದಲ್ಲದೆ ಮಹಾಭಾರತ ಭಗವತಾದಿಗಳ ಪ್ರತಿಕಲ್ಪದಲ್ಲಿ ಕಥೆಗಳು ನಡೆಯುತ್ತಲೆ ಇರುತ್ತದೆ. ಯಾರ ಹೃದಯದಲ್ಲಿ ಯಾವಾಗಲೂ ಭಗವಂತ ನೆಲೆಸಿದ್ದಾನೆ ಅವರು ಅಚ್ಯುತ ಸಂತರು. ಅಂತಹ ಅಚ್ಯುತ ಸಂತರ, ವಿಷ್ಣುಭಕ್ತರ ಕಥೆಗಳನ್ನು ಕೇಳುವುದಕ್ಕಾಗಿ ಕಿವಿಗಳನ್ನು ನಿಗರಿಸಿರುತ್ತಿರುತ್ತಿದ್ದ ಅಂಬರೀಶ ರಾಜ. ಅಂಬರೀಶ ಸ್ವಯಂ ವಿಷ್ಣುಭಕ್ತನಿದ್ದರೂ, ವಿಷ್ಣು ಭಕ್ತರಾದ ಇನ್ನೊಬ್ಬರನ್ನು ನೋಡಿದರೂ ಸಹನೆ ಆಗುತ್ತಿತ್ತು . ಇನ್ನೊಬ್ಬರ ಉತ್ಕರ್ಷವನ್ನು ಅಳಿಸಿ ದೊಡ್ಡವರಾಗುವ ಪ್ರಯತ್ನ ಮಾಡಬಾರದು. ಯಾರ ಹೃದಯದಲ್ಲಿ ಭಗವಂತ ಯಾವಾಗಲೂ ಭಗವಂತ ನೆಲೆಸಿದ್ದಾನೆ. ಅಂತಹ ಅಚ್ಚುತ ಸಂತರು ಅವರ ಕಥೆಯನ್ನು ಕೇಳುವುದಕ್ಕೆ ತನ್ನ ಕಥೆ ತನ್ನ ಕಿವಿಯನ್ನು ಜಾಗೃತವಾಗಿಟ್ಟಿದ್ದ ಕಾರಣ ವಿಷ್ಣುಭಕ್ತರ ಕಥೆ ವಿಷ್ಣುವಿನ ಮಹಿಮೆಯನ್ನು ತಿಳಿಸಿಕೊಡುತ್ತದೆ.

Exit mobile version