Home ಅಪರಾಧ ಎಲ್‌ಇಟಿ ಟಾಪ್ ಕಮಾಂಡರ್​ ಅಲ್ತಾಫ್ ಲಲ್ಲಿ ಫಿನಿಶ್

ಎಲ್‌ಇಟಿ ಟಾಪ್ ಕಮಾಂಡರ್​ ಅಲ್ತಾಫ್ ಲಲ್ಲಿ ಫಿನಿಶ್

0

ಶ್ರೀನಗರ: ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೋಯ್ಬಾ(ಎಲ್‌ಇಟಿ) ಸಂಘಟನೆಯ ಉನ್ನತ ಕಮಾಂಡರ್ ಅಲ್ತಾಫ್ ಲಲ್ಲಿ ಹತ್ಯೆಗೀಡಾಗಿದ್ದಾನೆ.
ಸೇನೆ ಮತ್ತು ಪೊಲೀಸರು ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಜಂಟಿ ಕಾರ್ಯಾಚರಣೆಗೆ ಇಳಿದ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಇದಕ್ಕೆ ಪ್ರತೀಯಾಗಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಟಾಪ್ ಕಮಾಂಡರ್ ಅಲ್ತಾಫ್ ಹತ್ಯೆಗೀಡಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ, ಉಗ್ರರನ್ನು ಸೆದೆಬಡಿಯುವ ಕೆಲಸದಲ್ಲಿ ಭಾರತೀಯ ಸೇನೆ ನಿರತವಾಗಿದೆ.

Exit mobile version