ದಾವಣಗೆರೆ: ನಗರದ ಐಟಿಐ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯಡಿ ಆಯೋಜಿಸಿರುವ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ನಿರುದ್ಯೋಗಿ ಯುವಕ, ಯುವತಿಯರು ಲಗ್ಗೆ ಇಟ್ಟಿದ್ದಾರೆ. ಈಗಾಗಲೇ ಆನ್ ಲೈನ್ ನಲ್ಲಿ 5200 ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದು, ಆಪ್ ಲೈನ್ ನಲ್ಲಿ 2000 ಅಭ್ಯರ್ಥಿಗಳು ನೋಂದಣಿ ಮಾಡಿಸುತ್ತಿದ್ದಾರೆ, ಈ ಉದ್ಯೋಗ ಮೇಳದಲ್ಲಿ 69 ಉದ್ಯೋಗ ನೀಡುವ ಕಂಪನಿಗಳು ಭಾಗವಹಿಸಿವೆ ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಮಲ್ಲಾಡ್ ತಿಳಿಸಿದ್ದಾರೆ.
