Home ನಮ್ಮ ಜಿಲ್ಲೆ ಧಾರವಾಡ ಉತ್ತಮ ಗುರುವಿಗೆ ಉತ್ತಮ ವಿದ್ಯಾರ್ಥಿ ದೊರಕುವುದು ಮುಖ್ಯ

ಉತ್ತಮ ಗುರುವಿಗೆ ಉತ್ತಮ ವಿದ್ಯಾರ್ಥಿ ದೊರಕುವುದು ಮುಖ್ಯ

0

ಧಾರವಾಡ: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪಾಠ ಮಾಡುವ ಗುರುಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕು ಹಸನಾಗಲಿ ಹಾಗೂ ಅವರು ಜೀವನದಲ್ಲಿ ಉತ್ತಮವನ್ನು ಸಾಧಿಸಲಿ ಎಂದು ಬಯಸುತ್ತಾನೆ ಎಂದು ಜೆ.ಎಸ್.ಎಸ್. ಐಟಿಐ ಕಾಲೇಜಿನ ಪ್ರಿನ್ಸಿಪಾಲ್ ಮಹಾವೀರ ಉಪಾಧ್ಯಾಯ ಹೇಳಿದರು.
1992-93 ರಿಂದ 2009-10ರಲ್ಲಿ ಜೆ.ಎಸ್.ಎಸ್ ಆವರಣದಲ್ಲಿಯ ಉದ್ಯೋಗ ಆಧಾರಿತ ಡಿಪ್ಲೂಮಾ ಕೋರ್ಸ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಮದಲ್ಲಿ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಅವರು ಮಾತನಾಡಿದರು.
ಒಂದು ಕಲ್ಲು ಒಬ್ಬ ಶಿಲ್ಪಿಕೈಯಲ್ಲಿ ಸುಂದರವಾದ ಮೂರ್ತಿಯಾಗಬೇಕಾದರೆ ಅದಕ್ಕೆ ಸಾಕಷ್ಟು ಉಳಿ ಪೆಟ್ಟು ಬೇಕಾಗುತ್ತದೆ, ಹಾಗೆ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಸಹನ ಶಕ್ತಿ, ಓದು ಮತ್ತು ಜೀವನದಲ್ಲಿ ಏನಾದರೂ ಸಾಧಿಸುತ್ತೇನೆ ಎಂಬ ಛಲ ಹೊಂದಿದಾಗ ಮಾತ್ರ ಉತ್ತಮ ಮೂರ್ತಿಯಾಗಲು ಸಾಧ್ಯ ಎಂದ ಅವರು ಉತ್ತಮ ಗುರುವಿಗೆ ಉತ್ತಮ ವಿದ್ಯಾರ್ಥಿ ದೊರಕುವುದು ಅಷ್ಟೇ ಮುಖ್ಯ ಎಂದು ಹೆಳಿದರು.
ಗುರುವಿಗೆ ಸನ್ಮಾಗಿಂತ ವಿದ್ಯಾರ್ಥಿಗಳು ತೋರುವ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದ ಮಹಾವೀರ ಉಪಾಧ್ಯಾಯ ಇದೇ ಸಂದರ್ಭದಲ್ಲಿ ಅಕಾಲಿಕ ಮರಣ ಹೊಂದಿದ ಇನ್ನೂಬ್ಬ ಸಹಪಾಟಿ ಗುರುಗಳಾದ ಹರೀಶ ಶಾಸ್ತ್ರಿ ಅವರನ್ನು ನೆನೆದು ಭಾವುಕರಾದರು.
ಜೆ.ಎಸ್.ಎಸ್. ಆವರಣದ ಡಿ.ಆರ್.ಎಚ್. ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರದಲ್ಲಿ ಕಾಲೇಜಿನ ಆಗೀನ ಪ್ರಯೋಗಿಕ ಶಿಕ್ಷಕರಾದ ಅಜೇಯ ದೊಡ್ಡಮನಿ ಅವರನ್ನೂ ಸನ್ಮಾನಿಸಲಾಯಿತು. ಎನ್.ಎಮ್. ಗುಲಶನಸಿಂಗ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Exit mobile version