Home ಅಪರಾಧ ಉಣಕಲ್ ಕೆರೆಯಲ್ಲಿ ಮುಳುಗಿ ಯುವಕ ಸಾವು

ಉಣಕಲ್ ಕೆರೆಯಲ್ಲಿ ಮುಳುಗಿ ಯುವಕ ಸಾವು

0

ಹುಬ್ಬಳ್ಳಿ: ಉಣಕಲ್‌ ಕೆರೆಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಬೆಂಗೇರಿಯ ಚೇತನ ಕಂಕಣ್ಣವರ(17) ಮೃತಪಟ್ಟ ಯುವಕ. ಬುಧವಾರ ಮಧ್ಯಾಹ್ನ ಉಣಕಲ್ ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ನಾಪತ್ತೆಯಾಗಿದ್ದನು. ಕಳೆದ ದಿನದಿಂದ ಯುವಕನಿಗಾಗಿ ಅಗ್ನಿಶಾಮಕ ದಳ, ಈಜು ತಜ್ಞರ, ಪೊಲೀಸರ ತಂಡ ತೀವ್ರ ಶೋಧ ನಡೆಸಿತ್ತು. ಗುರುವಾರ ಬೆಳಗ್ಗೆ ಯುವಕನ ದೇಹ ಪತ್ತೆಯಾಗಿದೆ. ವಿದ್ಯಾನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version