Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಇಬ್ಬರು ಪಿಯು ವಿದ್ಯಾರ್ಥಿಗಳು ಸಮುದ್ರಪಾಲು

ಇಬ್ಬರು ಪಿಯು ವಿದ್ಯಾರ್ಥಿಗಳು ಸಮುದ್ರಪಾಲು

0


ಉಳ್ಳಾಲ: ಸಮುದ್ರತೀರದಲ್ಲಿ ಆಟವಾಡುವ ಸಂದರ್ಭ ಅಪ್ಪಳಿಸಿದ ಅಲೆಗಳ ನಡುವೆ ಸಿಲುಕಿದ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲಾದ ಘಟನೆ ಉಳ್ಳಾಲ ತಾಲೂಕಿನ ಸೋಮೇಶ್ವರದಲ್ಲಿ ನಡೆದಿದೆ.
ಸೋಮೇಶ್ವರ ಪರಿಜ್ಞಾನ ದ್ವಿತೀಯ ಪಿಯುಸಿ ಕಾಲೇಜಿನ ಯಶ್ವಿತ್ ಹಾಗೂ ಯುವರಾಜ್ ಮೃತ ವಿದ್ಯಾರ್ಥಿಗಳು.
ಇವರ ಮೃತ ದೇಹಕ್ಕಾಗಿ ಸ್ಥಳೀಯ ಈಜುಗಾರರು, ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ. ಈ ಘಟನೆ ಹಿನ್ನಲೆ ಸೋಮೇಶ್ವರ ಸಮುದ್ರ ತೀರದಲ್ಲಿ ಮುಂಜಾಗ್ರತಾ ಕ್ರಮವಾಗಿ ಈಜಲು ತೆರಳದಂತೆ ಉಳ್ಳಾಲ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ ಸೂಚಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version