Home ನಮ್ಮ ಜಿಲ್ಲೆ ಮಹತ್ವದ ಗ್ಯಾರಂಟಿ ಘೋಷಿಸಿದ ʼಇಂಡಿಯಾʼ

ಮಹತ್ವದ ಗ್ಯಾರಂಟಿ ಘೋಷಿಸಿದ ʼಇಂಡಿಯಾʼ

0

ಬೆಂಗಳೂರು: ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಇದು ʼಇಂಡಿಯಾʼ ಗ್ಯಾರಂಟಿ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂದಿಯವರು ಇಂದು ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಮಾತಾನಡಿರುವ ದೃಶ್ಯವನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕರ್ನಾಟಕದಲ್ಲಿ ಐದು ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾಗಿವೆ. ʼಇಂಡಿಯಾ ಮೈತ್ರಿಕೂಟʼ ಅಧಿಕಾರಕ್ಕೆ ಬಂದರೆ ದೇಶದಲ್ಲೂ ಕೂಡ ಇನ್ನಷ್ಟು ಗ್ಯಾರಂಟಿಗಳು ಜಾರಿಯಾಗಲಿವೆ. ನಮ್ಮ ನಾಯಕರಾದ ರಾಹುಲ್‌ ಗಾಂಧಿ ಅವರು ಇಂದು ಅನ್ನದಾತರಿಗಾಗಿ ಮಹತ್ವದ ಗ್ಯಾರಂಟಿಯೊಂದನ್ನು ಘೋಷಿಸಿದ್ದಾರೆ. ನಮ್ಮ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು ಖಚಿತ ಎಂದಿದ್ದಾರೆ.

Exit mobile version