Home ತಾಜಾ ಸುದ್ದಿ ಆರೋಪಿಯನ್ನು ಎನ್‌ಕೌಂಟರ್ ಮಾಡಿ: ಮುತಾಲಿಕ್

ಆರೋಪಿಯನ್ನು ಎನ್‌ಕೌಂಟರ್ ಮಾಡಿ: ಮುತಾಲಿಕ್

0

ಹುಬ್ಬಳ್ಳಿ: ‘ವಿದ್ಯಾರ್ಥಿನಿಯರ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಳಕಳಿಯಿದ್ದರೆ, ನೇಹಾ ಕೊಲೆ ಪ್ರಕರಣದ ಆರೋಪಿಯನ್ನು ಎನ್’ಕೌಂಟರ್ ಮಾಡಲು ಆದೇಶ ಹೊರಡಿಸಬೇಕು. ಅವರ ಮನೆಯನ್ನು ಬುರ್ಡೋಜರ್ ಹಚ್ಚಿ ನೆಲಸಮ ಮಾಡಬೇಕು’ ಎಂದು ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.

ನೇಹಾ ಕುಟುಂಬ ವರ್ಗದವರಿಗೆ ಶುಕ್ರವಾರ ಸಾಂತ್ವನ ಹೇಳಿ, ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಕೊಲೆ ಪ್ರಕರಣದ ಅಪರಾಧಿಗೆ ಗಲ್ಲು ಶಿಕ್ಷೆ ನೀಡಬೇಕು ಎನ್ನುವ ಹೇಳಿಕೆಗಳೆಲ್ಲ ಹಾಸ್ಯಾಸ್ಪದ, ನಾಟಕವಾಗಿದೆ. ಅವನಿಗೆ ಜಾಮೀನು ದೊರೆಯುತ್ತದೆ, ಹೊರಗೆ ಬರುತ್ತಾನೆ.‌ ನಮ್ಮ ಕಾನೂನು, ನ್ಯಾಯಾಂಗ ವ್ಯವಸ್ಥೆಯೇ ಸರಿಯಿಲ್ಲ’ ಎಂದು‌ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿ ಮೊದಲು‌ ಅವಳನ್ನು ಪ್ರೀತಿಸಿದ್ದಾನೆ. ಮತಾಂತರ ಪ್ರಕ್ರಿಯೆ ನಡೆದಿಲ್ಲ ಎಂದು ನಂತರ ಅವಳನ್ನು ಹತ್ಯೆ ಮಾಡಿದ್ದಾನೆ. ಇದರಲ್ಲಿ ಅನುಮಾನವೇ ಇಲ್ಲ. ಎಲ್ಲಿಯವರೆಗೆ ಕಾಂಗ್ರೆಸ್ ಇರುತ್ತದೆಯೋ, ಅಲ್ಲಿವರೆಗೆ ಮುಸ್ಲಿಂ ಕ್ರೌರ್ಯ ಜೀವಂತ ಇರುತ್ತದೆ’ ಎಂದು ಆರೋಪಿಸಿದರು.

Exit mobile version