Home ನಮ್ಮ ಜಿಲ್ಲೆ ಚಿಕ್ಕಮಗಳೂರು ಆನೆ ದಾಳಿಗೆ ರೈತನ ಬಲಿ

ಆನೆ ದಾಳಿಗೆ ರೈತನ ಬಲಿ

0

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆ ಹಾಗೂ ಮಾನವ ಸಂಘರ್ಷ ಮುಂದುವರೆದಿದೆ.

ಆನೆ ದಾಳಿಗೆ ರೈತನೊಬ್ಬ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗುರುಪುರ ಗ್ರಾಮದಲ್ಲಿ ನಡೆದಿದೆ. ವೆಂಕಟೇಶ್ (58) ಮೃತ ದುರ್ದೈವಿ.

ಭಾನುವಾರ ತಡ ರಾತ್ರಿ ಮನೆ ಮುಂದಿರುವ ತೋಟದಲ್ಲಿದ್ದ ಹಸುವನ್ನು ಕಟ್ಟಲು ಹೋದಾಗ ಆನೆ ಉಸಿರಾಟದ ಶಬ್ದ ಕೇಳಿ ವೆಂಕಟೇಶ್ ಟಾರ್ಚ್ ಆನ್ ಮಾಡಿದ್ದಾರೆ.

ಈ ವೇಳೆ ವೆಂಕಟೇಶ್‌ ಅವರನ್ನು ಆನೆ ಸೊಂಡಿಲಿನಿಂದ ಎತ್ತಿ ತೆಂಗಿನ ಮರಕ್ಕೆ ಹೊಡೆದಿದೆ, ಪರಿಣಾಮ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ರು. ಪರಿಹಾರ ಕೊಟ್ಟರೆ ಜೀವ ಮರಳಿ ಬರುತ್ತಾ? ಕಾಡಾನೆಗಳಿಂದ ಶಾಶ್ವತ ಪರಿಹಾರ ನೀಡಿ ಅಂತ ಸಿಟ್ಟಿಗೆದ್ರು. ಜಿಲ್ಲೆಯ ಕಡೂರು ಅಜ್ಜಂಪುರ ತಾಲೂಕು ಹೊರತುಪಡಿಸಿದರೆ ಇನ್ನುಳಿದ ತಾಲೂಕುಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಜನ ಕಾಡಾನೆಗಳಿಂದ ಶಾಶ್ವತ ಪರಿಹಾರ ನೀಡಿ ಅಂತ ಆಗ್ರಹಿಸುತ್ತಿದ್ದಾರೆ.

Exit mobile version