Home ನಮ್ಮ ಜಿಲ್ಲೆ ಅವರ ಲೇಖನಗಳು, ವರದಿಗಳು ಸದಾ ನಮಗೆ ಮಾರ್ಗದರ್ಶಿಯಾಗಿವೆ

ಅವರ ಲೇಖನಗಳು, ವರದಿಗಳು ಸದಾ ನಮಗೆ ಮಾರ್ಗದರ್ಶಿಯಾಗಿವೆ

0

ಬೆಂಗಳೂರು: ಹಿರಿಯ ಪತ್ರಕರ್ತ ರಾಮ ಮನಗೂಳಿ ಅವರ ನಿಧನಕ್ಕೆ ಸಚಿವ ಎಂ ಬಿ ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಹಿರಿಯ ಪತ್ರಕರ್ತ ರಾಮ ಮನಗೂಳಿ ಅವಿಭಜಿತ ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳ ಕುರಿತು ತಮ್ಮ ಲೇಖನಗಳ ಮೂಲಕ ಸರಕಾರಕ್ಕೆ ಚುರುಕು ಮುಟ್ಟಿಸುತ್ತಿದ್ದರು.

ವಿಶೇಷವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ, ಆಲಮಟ್ಟಿ ಅಣೆಕಟ್ಟು ಎತ್ತರ ಮತ್ತು ಬಾಗಲಕೋಟೆ ನವನಗರ ನಿರ್ಮಾಣ, ಸಂತ್ರಸ್ತರಿಗೆ ಭೂ ಪರಿಹಾರ, ಪುನರ್ ವಸತಿ ಕುರಿತು ಸುದೀರ್ಘ ಅನುಭವ ಮತ್ತು ಅಪಾರ ಜ್ಞಾನ ಹೊಂದಿದ್ದ ಅವರು ತಮ್ಮ ಸರಣಿ ಲೇಖನಗಳ ಮೂಲಕ ಬೆಳಕು ಚೆಲ್ಲುತ್ತಿದ್ದರು. ನಾನು 2013-18 ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ದೂರವಾಣಿ ಮೂಲಕ ಅವರೊಂದಿಗೆ ಚರ್ಚಿಸಿದಾಗ ಸಲಹೆ ನೀಡುತ್ತಿದ್ದರು. ಅವರ ಅಗಲಿಕೆ ನನಗೆ ವೈಯಕ್ತಿವಾಗಿ ದುಃಖ ತಂದಿದೆ. ಅವರ ಲೇಖನಗಳು, ವರದಿಗಳು ಸದಾ ನಮಗೆ ಮಾರ್ಗದರ್ಶಿಯಾಗಿವೆ ಎಂದಿದ್ದಾರೆ.

https://twitter.com/MBPatil/status/1763466581693145150

Exit mobile version